ದಿಕ್ಕು ಬದಲಿಸಿದ ಚಿತ್ರಗಳು

Author : ಮಹಾದೇವ ಪ್ರಕಾಶ್

₹ 200.00




Year of Publication: 2020
Published by: ಅನ್ನಪೂರ್ಣ ಪ್ರಕಾಶನ
Address: # ಸಿರಿಗೇರಿ, ಜಿಲ್ಲೆ: ಬಳ್ಳಾರಿ
Phone: 09845031335

Synopsys

ಲೇಖಕ ಮಹಾದೇವ ಪ್ರಕಾಶ್ ಅವರ ಕೃತಿ-ದಿಕ್ಕು ಬದಲಿಸಿದ ಚಿತ್ರಗಳು. ವಸ್ತು, ಚಿತ್ರೀಕರಣ, ಸಂಭಾಷಣೆ, ದೃಶ್ಯಗಳು, ತಾಂತ್ರಿಕತೆ ಇತ್ಯಾದಿ ಅಂಶಗಳನ್ನು ಕೇಂದ್ರೀಕರಿಸಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಕಂಡು ಬಂದ ಮಹತ್ವದ ಚಿತ್ರಗಳನ್ನು ಪಟ್ಟಿ ಮಾಡಿ ಅವುಗಳ ಕುರಿತು ಬರೆದ ಕೃತಿ-ದಿಕ್ಕು ಬದಲಿಸಿದ ಚಿತ್ರಗಳು. ಲೇಖಕ ಮಹಾದೇವ ಪ್ರಕಾಶ್ ಅವರ ಈ ಕೃತಿಯು, ಕನ್ನಡ ಚಲನಚಿತ್ರ ರಂಗವು ಬೆಳೆದು ಬಂದ ದಾರಿ, ಕನ್ನಡ ಸಾಹಿತ್ಯವನ್ನು ಬಳಸಿಕೊಂಡ ಬಗೆ, ಸಮಾಜವನ್ನು ಕೇಂದ್ರೀಕರಿಸಿ ಚಿತ್ರೀಕರಣ ನಡೆಸಿದ ಸಾಮಾಜಿಕ ಹೊಣೆಗಾರಿಕೆಯ ಎಚ್ಚರ ಇಂತಹ ಸಂಗತಿಗಳನ್ನು, ನಟರನ್ನು, ನಿದೇರ್ಶಕ-ನಿರೂಪಕರ ಯೋಜನೆ-ಯೋಚನೆಗಳನ್ನು ಲೇಖಕರು ಚರ್ಚಿಸಿದ್ದಾರೆ.

About the Author

ಮಹಾದೇವ ಪ್ರಕಾಶ್ - 14 May 2021)

ಲೇಖಕ ಹಾಗೂ ಅಂಕಣಕಾರ ಮಹಾದೇವ ಪ್ರಕಾಶ್ ಅವರು ,ಮೂಲತಃ ಪತ್ರಕರ್ತರು. 1975ರಲ್ಲಿ ಶ್ರೀ ವೀರೇಂದ್ರ ಪಾಟೀಲರು ಆರಂಭಿಸಿದ ಲೋಕವಾಣಿ ದಿನಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದರು. ‘ಈ ಭಾನುವಾರ" ನಿಯತ ಕಾಲಿಕೆ ನಡೆಸಿದರು. ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ‘ಹೊರಳು ನೋಟ’ ಅಂಕಣಕಾರರಾಗಿದ್ದರು.  ಕೃತಿಗಳು: ಹೊರಳು ನೋಟ( ಅಂಕಣ ಬರಹಗಳು), ಆರಂಕುಶಮಿಟ್ಟೊಡೆಂ ನೆನೆವುದೆನ್ನ ಮನಂ’ (ಸ್ವಾತಂತ್ರಪೂರ್ವದ ಕರ್ನಾಟಕದ ರಾಜಕೀಯ ಇತಿಹಾಸದ ವಿಶ್ಲೇಷಣೆ), ದಣಿವರಿಯದ ಧೀಮಂತ (ಬಿ.ಎಸ್. ಯಡಿಯೂರಪ್ಪನವರ ಜೀವನ ಗಾಥೆ), ಮಾಣಿಕ್ಯದ ದೀಪ್ತಿ, ಮುತ್ತಿನಹಾರ, ಸ್ಪಟಿಕದ ಸಲಾಕೆ ( ಈ ಮೂರೂ ಕೃತಿಗಳು- ಈ ಭಾನುವಾರ ಪತ್ರಿಕೆಯ ಸಂಪಾದಕೀಯ ಬರಹಗಳು),  ...

READ MORE

Related Books