ಲೇಖಕ ಹಾಗೂ ಅಂಕಣಕಾರ ಮಹಾದೇವ ಪ್ರಕಾಶ್ ಅವರು ,ಮೂಲತಃ ಪತ್ರಕರ್ತರು. 1975ರಲ್ಲಿ ಶ್ರೀ ವೀರೇಂದ್ರ ಪಾಟೀಲರು ಆರಂಭಿಸಿದ ಲೋಕವಾಣಿ ದಿನಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದರು. ‘ಈ ಭಾನುವಾರ" ನಿಯತ ಕಾಲಿಕೆ ನಡೆಸಿದರು. ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ‘ಹೊರಳು ನೋಟ’ ಅಂಕಣಕಾರರಾಗಿದ್ದರು.
ಕೃತಿಗಳು: ಹೊರಳು ನೋಟ( ಅಂಕಣ ಬರಹಗಳು), ಆರಂಕುಶಮಿಟ್ಟೊಡೆಂ ನೆನೆವುದೆನ್ನ ಮನಂ’ (ಸ್ವಾತಂತ್ರಪೂರ್ವದ ಕರ್ನಾಟಕದ ರಾಜಕೀಯ ಇತಿಹಾಸದ ವಿಶ್ಲೇಷಣೆ), ದಣಿವರಿಯದ ಧೀಮಂತ (ಬಿ.ಎಸ್. ಯಡಿಯೂರಪ್ಪನವರ ಜೀವನ ಗಾಥೆ), ಮಾಣಿಕ್ಯದ ದೀಪ್ತಿ, ಮುತ್ತಿನಹಾರ, ಸ್ಪಟಿಕದ ಸಲಾಕೆ ( ಈ ಮೂರೂ ಕೃತಿಗಳು- ಈ ಭಾನುವಾರ ಪತ್ರಿಕೆಯ ಸಂಪಾದಕೀಯ ಬರಹಗಳು),