ನಿರ್ದೇಶಕ ಟಿ. ಎಸ್. ನಾಗಾಭರಣ ಅವರ ಸಿನಿಮಾಗಳ ಅಧ್ಯಯನ ನಡೆಸಿದ ಸಂಶೋಧನಾ ಪ್ರಬಂಧ. ಡಾ. ಎನ್. ಕೆ. ಪದ್ಮನಾಭ ಅವರು ಜನಪ್ರಿಯ ಮತ್ತು ಕಲಾತ್ಮಕ ಚಿತ್ರಗಳ ನಡುವೆ ಸಮನ್ವಯ ಸಾಧಿಸಿದ ನಾಗಾಭರಣರ ಅನನ್ಯ ಹಾದಿಯ ಹೆಜ್ಜೆಗಳನ್ನು ಈ ಪ್ರಬಂಧದಲ್ಲಿ ದಾಖಲಿಸಿದ್ದಾರೆ. ನಾಗಾಭರಣ ಅವರ ಅಧ್ಯಯನವೆಂದರೆ ಕೇವಲ ಕನ್ನಡ ಚಿತ್ರೋದ್ಯಮ ಮಾತ್ರವಲ್ಲ, ಕಿರು ತೆರೆಯ ಕುರಿತ ಅಧ್ಯಯನವೂ ಹೌದು.ಈ ಕೃತಿಯಲ್ಲಿ ಒಟ್ಟು 10 ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯದಲ್ಲಿ ಸಿನಿಮಾ ಪರಂಪರೆ, ಅದಕ್ಕೆ ಕಲಾತ್ಮಕವಾಗಿ ನಾಗಾಭರಣ ಅವರ ಕೊಡುಗೆಗಳನ್ನು ವಿವರಿಸಿದ್ದಾರೆ. ಎರಡನೆ ಅಧ್ಯಾಯದಲ್ಲಿ ನಾಗಾಭರಣ ಅವರ ಸಿನಿಮಾ ಕರ್ತೃತ್ವ ಶಕ್ತಿ ಮತ್ತು ಸೃಜನಶೀಲ ಸಾಧ್ಯತೆಗಳನ್ನು ಅವಲೋಕಿಸಿದ್ದಾರೆ. ಹಾಗೆಯೇ ನಾಗಾಭರಣ ಅವರು ತಮ್ಮ ಸಿನಿಮಾಗಳಲ್ಲಿ ಎತ್ತಿಕೊಂಡ ಜಾತಿ ಧರ್ಮಸೂಕ್ಷತೆಗಳು ಮತ್ತು ಮೌಲಿಕ ಆಶಯಗಳನ್ನು ಮೂರನೇ ಅಧ್ಯಾಯದಲ್ಲಿ ಚರ್ಚಿಸಿದ್ದಾರೆ. ಹಾಗೆಯೇ ಆಧುನಿಕತೆ, ಅಭಿವೃದ್ಧಿ ಮತ್ತು ವಿವಿಧ ತಲ್ಲಣಗಳು ಹೇಗೆ ನಾಗಾಭರಣ ಅವರ ಸಿನಿಮಾದಲ್ಲಿ ಕಲಾತ್ಮಕವಾಗಿ ಅಭಿವ್ಯಕ್ತಿಗೊಂಡಿವೆ ಎನ್ನುವುದನ್ನು ವಿವರಿಸಿದ್ದಾರೆ. ಪದ್ಮನಾಭ ಅವರು ಈ ಕೃತಿಯ ಮೂಲಕ ನಾಗಾಭರಣರ ಸಿನಿಮಾಗಳು ಧ್ವನಿಸುವ ಒಟ್ಟು ಆಶಯಗಳನ್ನು ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.