ಹಿರಿಯ ಲೇಖಕರೂ ಪತ್ರಕರ್ತರೂ ಆಗಿರುವ ಜಿ.ಎನ್. ರಂಗನಾಥರಾವ್ ಅವರು ಪತ್ರಿಕೋದ್ಯಮದಲ್ಲಿ ಸುದೀರ್ಘ ಸೇವೆ ಸಲ್ಲಿಸಿದವರು. ಪ್ರಜಾವಾಣಿಯಲ್ಲಿ ಹಲವು ಹಂತದ ಹುದ್ದೆ ನಿರ್ವಹಿಸಿ ಆರು ವರ್ಷ ಸಂಪಾದಕರಾಗಿಯೂ ಜವಾಬ್ದಾರಿ ಹೊತ್ತಿದ್ದವರು ರಂಗನಾಥರಾವ್. ಅವರೀಗ ಮಾಧ್ಯಮ ಲೋಕದಲ್ಲಿನ ತಮ್ಮ ಪಯಣದ ಕಥನವನ್ನು ’ಆ ಪತ್ರಿಕೋದ್ಯಮ’ ಕೃತಿಯ ಮೂಲಕ ಹೇಳಿದ್ದಾರೆ. ತಾಯಿನಾಡು, ಸಂಯುಕ್ತ ಕರ್ನಾಟಕದಿಂದ ತಮ್ಮ ವೃತ್ತಿಬದುಕು ಆರಂಭಿಸಿದ್ದ ಅವರು, ಲೇಖಕರು, ವಿಮರ್ಶಕರಾಗಿಯೂ ಖ್ಯಾತರಾದವರು. ಸಣ್ಣಕಥೆ, ಕಾದಂಬರಿ, ನಾಟಕ, ಪ್ರಬಂಧ, ಅನುವಾದ ಮೊದಲಾದ ಪ್ರಕಾರಗಳಲ್ಲಿ ಅನೇಕ ಕೃತಿಗಳನ್ನು ಕೊಟ್ಟಿದ್ದಾರೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕೃತಿಗಳನ್ನೂ ರಚಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಮೊದಲಾದ ಗೌರವಗಳಿಗೆ ಪಾತ್ರರಾಗಿರುವ ಅವರ ಈ ಕೃತಿ ಅವರ ಪತ್ರಿಕೋದ್ಯಮ ಪಯಣದ ಕಥನವನ್ನು ಬಿಚ್ಚಿಟ್ಟಿದೆ.
"ಇಲ್ಲಿರುವುದು ನನ್ನ ವೃತ್ತಿಜೀವನದ ಕೆಲವು ಪುಟಗಳು. ನಾನು, ನನ್ನ ಪತ್ರಿಕಾ ವ್ಯವಸಾಯ ಮತ್ತು ಆ ಕಾಲಘಟ್ಟದಲ್ಲಿನ ಸಮಾಜದ ನೋಟ, ದನಿಗಳು ಇಲ್ಲಿದೆ ಎಂದು ನನ್ನ ನಮ್ರ ಅನಿಸಿಕೆ" ಎಂದು ಜಿ.ಎನ್.ರಂಗನಾಥ ರಾವ್ ಅವರು ತಮ್ಮ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ.
©2024 Book Brahma Private Limited.