ಮುದ್ದು ತೀರ್ಥಹಳ್ಳಿ -ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಮಲೆನಾಡಿನ ಅಪ್ಪಟ ಪ್ರತಿಭೆ. ಮೂಲತಃ ತೀರ್ಥಹಳ್ಳಿಯವರು. 1998ರ ಡಿಸೆಂಬರ್ 03 ರಂದು ಜನನ. ಮುದ್ದು ತೀರ್ಥಹಳ್ಳಿ ಎಂಬ ಕಾವ್ಯನಾಮದೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ‘ಹೂ ಗೊಂಚಲು’, ‘ಕಾನನ ಕಲರವ’, ‘ಎಷ್ಟು ಬಣ್ಣದ ಇರುಳು’, ‘ಒಂದು ಚಂದ್ರನ ತುಂಡು’, ‘ಕಾಡಹಾದಿಯ ಹೂಗಳು’ ಕೃತಿಗಳನ್ನು ಪ್ರಕಟಿಸಿದ್ದು, ಅಂಕಣಕಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ.