ಲೇಖಕ ವಿ.ಎಸ್. ಶಾನಭಾಗ (ವಿವೇಕ ಎಸ್. ಶಾನಭಾಗ) ಮೈಸೂರು ಜಿಲ್ಲೆಯ ರಿಪ್ಪನಪೇಟೆಯವರು. ಮೈಸೂರು ವಿ.ವಿ.ಯಿಂದ ಬಿ.ಎಸ್.ಸಿ ಹಾಗೂ ಮುಂಬೈ ವಿ.ವಿ.ಯಿಂದ ಎಂ.ಎ, ಪದವೀಧರರು. ಇವರು ಬೆಳೆದಿದ್ದು ಉಪ್ಪುಂದ ಕುಂದಾಪುರದಲ್ಲಿ. ತಟ್ಟೀರಾಯ ಮತ್ತು ನಾನು, ಹೊಳೆದಿದ್ದನ್ನು ಹೇಳಲಿಲ್ಲ, ಇದು ಅಂತರೆಂಗದ ಸುದ್ದಿ, ಶಬ್ದತೀರದ ಆಚೆ ಈಚೆ, ಮಾತು ಮೌನಗಳ ಮಧ್ಯೆ,ಒದ್ದೆ ಬಳಪದ ಹಾದಿ, ಪಕಳಿಗಳು (ಕವನ ಸಂಕಲನಗಳು), ಹೂವು ಬಿಡುವಾಗಿನ ಕನಸು ಹೊತ್ತು, ಹೊಳೆದಷ್ಟು ಸಾಲು ಸಾಲು, ಮುಂಬೈ ಎಂಬ ಮಾನಸಿಕ ಕ್ರಿಯೆ ಹೀಗೆ ಇತರೆ ಕೃತಿಗಳನ್ನು ರಚಿಸಿದ್ದಾರೆ. ಮುಂಬೈಯಲ್ಲಿ ನಡೆದ ಕನ್ನಡ ಕವಿಗೋಷ್ಠಿಗಳಲ್ಲಿ ಭಾಗಿ ಹಾಗೂ ಅಧ್ಯಕ್ಷತೆವಹಿಸಿದ್ದಾರೆ.