ವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಸಿ. (ಶ್ರೀಕೃಷ್ಣ) ಸರದೇಶಪಾಂಡೆ ಅವರು ಮೂಲತಃ ಧಾರವಾಡದವರು. ಭಾರತೀಯ ಸೇನೆಯ ಕುಮಾಂವು ರೆಜಿಮೆಂಟ್ ನಲ್ಲಿ 35 ವರ್ಷ ಸೇವೆ ಸಲ್ಲಿಸಿದರು. 1990ರಲ್ಲಿ ನಿವೃತ್ತರಾದರು. ಕಥೆ-ಕಾದಂಬರಿ ರಚಿಸುತ್ತಿದ್ದು, ಪರಿಸರ ಕುರಿತ ಲೇಖನಗಳನ್ನು ಬರೆಯುತ್ತಿದ್ದಾರೆ. ಸಮರ ಕುರಿತ ಬರಹಗಳೂ ಇವೆ. ಈಗಾಗಲೇ ಒಟ್ಟು 20 ಕೃತಿಗಳನ್ನು ರಚಿಸಿದ್ದಾರೆ. ಮಿಲಿಟರಿ ಸಂಬಂಧಿತ ಬರಹಗಳನ್ನು ಕನ್ನಡದಲ್ಲಿ ತರುವ ಪ್ರಯತ್ನ ಇವರದು.
ಕೃತಿಗಳು: ಭಾರತೀಯ ಯುದ್ಧ ಪರಂಪರೆ ಮತ್ತು ಸೈನಿಕನೇಕೆ ಹೋರಾಡು ತ್ತಾನೆ. ‘ಸಿಯಾಚಿನ್ ಗೆ ದೂರ ದಾರಿ ಅದೇಕೆ? (ಅನುವಾದಿತ ಕೃತಿಗಳು), ಯುದ್ಧ ಯೋಧ (ಯುದ್ಧ ಹಾಗೂ ಯೋಧರ ಸ್ಥಿತಿಯ ಚಿತ್ರಣ)