ಜಯಂತ ಕಾಯ್ಕಿಣಿ ಅವರ ಸಿನೆಮಾ ಕುರಿತ ಲೇಖನಗಳ ಸಂಕಲನ ‘ಟೂರಿಂಗ್ ಟಾಕೀಸ್’. ಸಿನೆಮಾ ಲೋಕದ ತಮ್ಮ ವಿಸ್ಮಯ ಅನುಭವಗಳಿಗೆ ರೂಪು ನೀಡಿರುವ ಕಾಯ್ಕಿಣಿ ಅವರು ಸಿನೆಮಾ ಒಂದರ್ಥದಲ್ಲಿ ತಮ್ಮಂಥವರನ್ನೂ ಬೇಷರತ್ ಲಾಲನೆ-ಪಾಲನೆ ಮಾಡಿದ ತಾಯಿ ಎನ್ನುತ್ತಾರೆ. ಇಲ್ಲಿರುವ ಸಾಕಷ್ಟು ಟಿಪ್ಪಣಿರೂಪದ ಲೇಖನಗಳು, ಸಿನಿಮಾ ಕುರಿತ ಮಾಸಿಕ ಪತ್ರಿಕೆ ರೂಪಾತಾರದಲ್ಲಿ ಪ್ರಕಟವಾಗಿವೆ. ಇತ್ತೀಚೆಗೆ, ಈ ಕೃತಿಯ ವಿಶೇಷ ವಿಸ್ತೃತ ಆವೃತ್ತಿಯನ್ನು ಪ್ರಕಟಿಸಲಾಗಿದೆ. 2013ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿಯು ಹೊಸ ಆವೃತ್ತಿಗಳೊಂದಿಗೆ 2017ರಲ್ಲಿ ಮರು ಮುದ್ರಣಗೊಂಡಿದ್ದು, 2021ರಲ್ಲಿಯೂ ಹೊಸ ಆವೃತ್ತಿಗಳೊಂದಿಗೆ ಪ್ರಕಟಗೊಂಡಿದೆ.
©2024 Book Brahma Private Limited.