ಶುಭಂ ಹಳೆಯ ಸಿನಿಮಾದ ಕೊನೆಯ ಫ್ರೇಮು

Author : ಗಣೇಶ್‌ ಕಾಸರಗೋಡು

Pages 870

₹ 750.00




Year of Publication: 2019

Synopsys

ಚಿತ್ರರಂಗದ ದಶಕದ ಅನುಭವವನ್ನು ಕಟ್ಟಿಕೊಟ್ಟಿರುವ ಕೃತಿ ’ಶುಭಂ’. ಒಂದು ತಲೆಮಾರಿನ ಕನ್ನಡ ಚಿತ್ರರಂಗ ತೆರೆದಿಟ್ಟ ಅಂತರಂಗ. ಚಿತ್ರರಂಗ ಬದುಕಿನ ಏರುಪೇರು, ಯಶಸ್ಸು, ಸಾಹಸ ಎಲ್ಲವನ್ನೂ ಕತೆಯ ರೂಪದಲ್ಲಿ ಲೇಖಕರು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ರಾಜಕುಮಾರ್ ಬಗೆಗಿನ ಬರಹಗಳು, ಪಿ.ಬಿ.ಶ್ರೀನಿವಾಸ, ಆರತಿ, ರಾಜು ಅನಂತಸ್ವಾಮಿ, ವಿಷ್ಣು, ರವಿಚಂದ್ರನ್‌ ಹೀಗೆ ಹಲವಾರು ತಾರೆಯರೊಂದಿಗಿನ ಒಡನಾಟವನ್ನು ಲೇಖಕ ಗಣೇಶ್ ಕಾಸರಗೋಡು ಈ ಕೃತಿಯಲ್ಲಿ ವಿವರಿಸಿದ್ದಾರೆ. 

About the Author

ಗಣೇಶ್‌ ಕಾಸರಗೋಡು

ಗಣೇಶ್ ಕಾಸರಗೋಡು ಹುಟ್ಟಿದ್ದು ಕಾಸರಗೋಡಿನಲ್ಲಿ ಓದಿದ್ದೂ ಅಲ್ಲೇ. ಎಂ.ಎ. (ಕನ್ನಡ) ಪದವಿಯಲ್ಲಿ ರ್‍ಯಾಂಕ್ ವಿಜೇತರು. ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿದ್ದರು. ನಂತರ ಬಂದಿದ್ದು ಪತ್ರಿಕೋದ್ಯಮಕ್ಕೆ. ಮೊದಲು 'ಚಿತ್ರ ದೀಪ', ನಂತರ 'ಚಿತ್ರ ತಾರಾ', ಆ ನಂತರ 'ಅರಗಿಣಿ'. ಕಾಲಾನುಕ್ರಮದಲ್ಲಿ ಸಂಯುಕ್ತ ಕರ್ನಾಟಕ', 'ಕರ್ಮವೀರ', 'ವಿಜಯ ಕರ್ನಾಟಕ' ದಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ, ಸದ್ಯಕ್ಕೆ 'ಸುವರ್ಣ ಟೈಂಸ್ ಆಫ್ ಕರ್ನಾಟಕ' ದಲ್ಲಿ ಅಂಕಣಕಾರ. ಪತ್ರಿಕೋದ್ಯಮದ ಸೇವೆ ಗುರುತಿಸಿ - ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ , ಮಂತ್ರಾಲಯದ ವಿಜಯ ವಿಠಲ ಪ್ರಶಸ್ತಿ , ಪತ್ರಕರ್ತರ ವೇದಿಕೆ ಪ್ರಶಸ್ತಿ , ...

READ MORE

Related Books