ಆಯೋಜಿತ ಎನ್ಕೌಂಟರ್ಗಳ ಪಾಪ ನಿವೇದನೆಯೇ ’ನನ್ನ ಕೈಗಂಟಿದ ನೆತ್ತರು’. ಸೈನ್ಯದ ಹಿರಿಯ ಅಧಿಕಾರಿಯೊಬ್ಬರು ಅನಾಮಧೇಯರಾಗಿ ಪತ್ರಕರ್ತರ ಮುಂದೆ ನಿವೇದಿಸಿಕೊಂಡ ತಪ್ಪೊಪ್ಪಿಗೆಯನ್ನು ಪತ್ರಕರ್ತ ಕಿಶಾಲಯ್ ಭಟ್ಟಾಚಾರ್ಜಿ ಅಕ್ಷರ ರೂಪಕ್ಕೆ ತಂದಿದ್ದರು. ಇದನ್ನು ಗಿರೀಶ್ ತಾಳಿಕಟ್ಟೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಶಸ್ತಿಗಾಗಿ, ಭಡ್ತಿಗಾಗಿ ಸೈನಿಕರು ಮಾಡುವ ಕೊಲೆಗಳು, ಅಫೀಮು ಮಾರಾಟ ಮತ್ತು ಕಳ್ಳ ಸಾಗಣೆಯಿಂದ ಗಳಿಸುವ ಕೋಟಿ ಕೋಟಿ ಹಣ, ಅದನ್ನೆಲ್ಲ ಮುಚ್ಚಿ ಹಾಕುವ ಸಲುವಾಗಿ ವ್ಯವಸ್ಥೆಯ ದೌರ್ಬಲ್ಯಗಳನ್ನು ಬಳಸಿಕೊಳ್ಳುವ ಬಗೆ ಇವೆಲ್ಲವನ್ನು ಈ ಕೃತಿಯಲ್ಲಿ ಲೇಖಕರು ಬಿಚ್ಚಿಟ್ಟಿದ್ದಾರೆ.
©2025 Book Brahma Private Limited.