ಅನಾಥ ಪಕ್ಷಿ

Author : ವೀರಭದ್ರ

Pages 210

₹ 85.00




Year of Publication: 2007

Synopsys

ತೆಲುಗು ಸಾಹಿತ್ಯದ  ವಿಶ್ವನಾಥ ಸತ್ಯನಾರಾಯಣ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಸಮಕಾಲೀನ ಭಾರತೀಯ ಲೇಖಕರ ಸಾಲಿನಲ್ಲಿ ಬಹಳ ಗೌರವಯುತವಾದ ಹೆಸರನ್ನು ಪಡೆದುಕೊಂಡಿದ್ದಾರೆ. ಅವರ ’ಅನಾಥ ಪಕ್ಷಿ’ ಕಾದಂಬರಿಯನ್ನು ಕನ್ನಡಕ್ಕೆ ವೀರಭದ್ರ ಅನುವಾದಿಸಿದ್ದಾರೆ.

ಹುಟ್ಟುವಾಗಲೇ ಅನಾಥನಾದ ವ್ಯಕ್ತಿಯೊಬ್ಬನ ಕಥೆ ಇದು. ಚಿಕ್ಕಮ್ಮನ ಮನೆಯ ಕಷ್ಟದ ವಾತಾವರಣದಲ್ಲಿ ಬೆಳೆದು, ಅಲ್ಲಿಂದ ಮನೆಬಿಟ್ಟು ಬೇರೆಮನೆ ಸೇರಿ, ಅಲ್ಲಿ ದನಕಾಯ್ದು ಕೊಂಡು, ಅದೃಷ್ಟವಶಾತ್ ಓದು ಬರಹವನ್ನು ಕಲಿತು ನಂತರ ಜೀವನದ ಹಲವು ತಿರುವುಗಳಲ್ಲಿ ನಡೆಯುವುದು ಕೃತಿಯ ಪ್ರಮುಖ ಕಥಾವಸ್ತು.

About the Author

ವೀರಭದ್ರ
(10 July 1937)

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿಯವರಾದ ವೀರಭದ್ರ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ವಸ್ತು ಮತ್ತು ಭಾಷೆಯಲ್ಲಿ ಹೊಸತನ ತಂದ ವೀರಭದ್ರ ಅವರು ತೆಲುಗು ಮತ್ತು ಇತರ ಭಾಷೆಯ ಕೃತಿಗಳನ್ನೂ ಕನ್ನಡೀಕರಿಸಿದ್ದಾರೆ. ನೀಲಿ ನೀರಿನ ಮೇಲೆ, ಈ ಭೂಮಿ ಈ ಆಕಾಶ, ಮರೆಯವರು, ಬಾವಿಯಿಂದ ಬೇಲಿಗೆ, ಕನ್ನಡಿ ನೋಡಿದ ನಾಯಿ (ಕಥಾ ಸಂಕಲನಗಳು), ಅನಾಥ ಪಕ್ಷಿಯ ಕಲರವ (ಸಮಗ್ರ ಕಥೆಗಳು), ದಶಕದ ಕಥೆಗಳು (ಸಂಪಾದಿತ ಸಂಕಲನ), ಸುತ್ತೂರ ಸುರಧೇನು (ಕಾದಂಬರಿ), ನನ್ನೆಲೆ ಕಥೆ ಬರೆಯೋಲ್ಲವೆ, ಮರಳಿನ ದಿನ್ನೆಗಳು (ಅನುವಾದಿತ ಕಥೆಗಳು), ಚರಿತ್ರಹೀನ, ದೇವದಾಸ, ನಾನು ಮಾಧವಿ, ಮನೆ ಸುಟ್ಟಿತು, ರಾಮನ ಬುದ್ಧಿವಂತಿಕೆ, ಕತ್ತಲಲ್ಲಿ ...

READ MORE

Related Books