‘ನಮ್ಮ ಲಿಪಿ ಹುಟ್ಟಿನ ಪೂರ್ವೋತ್ತರಗಳು’ ತಿರುಮಲ ರಾಮಚಂದ್ರ ಅವರ ತೆಲುಗು ಕೃತಿಯನ್ನು ಲೇಖಕ, ಅನುವಾದಕ ಡಾ. ಟಿ.ಡಿ.ರಾಜಣ್ಣ ತಗ್ಗಿ ಅವರು ಕನ್ನಡೀಕರಿಸಿದ್ದಾರೆ. ಪ್ರಪಂಚದ ಅನೇಕ ಲಿಪಿಗಳ ಪರಿಣಾಮ ಕ್ರಮವನ್ನು ಈ ಕೃತಿಯು ಪರಿಚಯಿಸುತ್ತದೆ. ಆರಂಭ ಕಾಲದ ಸಜೀವ ಗ್ರಂಥಾಲಯದ ಕತೆಯನ್ನು ಮತ್ತು ಲಿಪಿ ಹುಟ್ಟುವ ಮುನ್ನ ಮನುಷ್ಯನಲ್ಲಿದ್ದ ಅಗಾಧ ನೆನಪಿನ ಶಕ್ತಿಯನ್ನು ಈಜಿಪ್ಟ್ ಗಳ ಈಡೋಸ್ ಗಳ ವಿವರಣೆ ನೀಡುತ್ತದೆ. ಈಜಿಪ್ಟ್ ನ ಅಕ್ಷರ ಯಾತ್ರೆಯ ಬಗೆಗೆ ಮಾಹಿತಿ ಒದಗಿಸುವ ಈ ಕೃತಿಯು ಭಾರತದ ಅನೇಕ ಭಾಷೆಗಳ ಲಿಪಿಗಳ ಮಾಹಿತಿ ನೀಡುತ್ತದೆ. ನಮ್ಮ ಲಿಪಿಗೆ ಬೌದ್ಧರು ಮತ್ತು ಜೈನರು ಮಾಡಿದ ಪ್ರಚಾರಗಳನ್ನು ಅನೇಕ ಉಪಕತೆಗಳ ಮೂಲಕ ಕಟ್ಟಿಕೊಡುವ ಈ ಕೃತಿ, ಬ್ರಾಹ್ಮಿ ಲಿಪಿಯ ಅವತಾರಗಳನ್ನು ಮತ್ತು ಅದರ ಅನೇಕ ಲಕ್ಷಣಗಳನ್ನು ಪರಿಚಯಿಸುತ್ತದೆ. ಒಂದೇ ಸ್ವರೂಪವನ್ನು ಒಳಗೊಂಡಿರುವ ಕನ್ನಡ ಮತ್ತು ತೆಲುಗು ಲಿಪಿಯನ್ನು ಕುರಿತು ಪ್ರಮುಖವಾಗಿ ಚರ್ಚೆ ಮಾಡುತ್ತದೆ. ನಮ್ಮ ಲಿಪಿಯ ಪ್ರಾಚೀನತೆ, ಆ ಲಿಪಿಯ ಮೂಲ, ಲಿಪಿ ಹುಟ್ಟುವ ಮೊದಲು ಇದ್ದ ಸ್ವರೂಪಗಳು ಅಥವಾ ಚಿಹ್ನೆಗಳನ್ನು ತಿಳಿಸುತ್ತಾ, ಕನ್ನಡ - ತೆಲುಗು ಲಿಪಿಯ ಪರಿಣಾಮ ಕ್ರಮವನ್ನು ಸಮರ್ಥವಾಗಿ ಕಟ್ಟಿಕೊಡುವ ಕೃತಿಯಾಗಿದೆ.
©2025 Book Brahma Private Limited.