ವೈಷ್ಣವದಿಂದ ಶ್ರೀವೈಷ್ಣವಕ್ಕೆ

Author : ಸುಕನ್ಯಾ ಕನಾರಳ್ಳಿ

Pages 80

₹ 100.00




Year of Publication: 2020
Published by: ಅಭಿನವ ಪ್ರಕಾಶನ
Address: ಬೆಂಗಳೂರು

Synopsys

‘ವೈಷ್ಣವದಿಂದ ಶ್ರೀವೈಷ್ಣವಕ್ಕೆ’ ಹಿರಿಯ ಲೇಖಕ, ಸಂಶೋಧಕ. ದಿವಂಗತ ಷ.ಶೆಟ್ಟರ್ ಅವರ ಕೃತಿಯನ್ನು ಸುಕನ್ಯಾ ಕನಾರಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯ ಎಚ್.ಎಸ್. ಗೋಪಾಲ ರಾವ್ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿ ಕುರಿತು ವಿವರಿಸುತ್ತಾ ‘ಸಾಮಾನ್ಯವಾಗಿ ಶ್ರೀವೈಷ್ಣವ ಮತ್ತು ವೈಷ್ಣವ ಪಂಥಗಳು ರಾಮಾನುಜರು ಮತ್ತು ಮಧ್ವಾಚಾರ್ಯರ ನಂತರ ಪ್ರಸಿದ್ಧಿಗೆ ಬಂದವು ಎಂದು ತಿಳಿಯಲಾಗಿದೆ. ಆದರೆ ಬಾದಾಮಿ ಚಾಲುಕ್ಯರ ಕಾಲಕ್ಕಾಗಲೇ ವೈಷ್ಣವ ಪಂಥ ಪ್ರಸಿದ್ಧವಾಗಿತ್ತು. ಮಂಗಳೀಶನನ್ನು ಬಾದಾಮಿಯ ಒಂದು ಶಾಸನ ಪರಮಭಾಗವತ ಎಂದೇ ಕರೆದಿದೆ. ಬಾದಾಮಿಯ ವಿಷ್ಣುಗೃಹವೂ ಅವನ ಕಾಲದ ನಿರ್ಮಾಣ. ಕಾಲದಿಂದ ಕಾಲಕ್ಕೆ ತಾವು ಒಪ್ಪಿಕೊಂಡ ಪಂಥಗಳಲ್ಲಿ ಬದಲಾವಣೆಗಳನ್ನು ಕಾಣುವ ಪ್ರಯತ್ನ ನಡೆದಿರುತ್ತದೆ. ಅದು ಸಂಘರ್ಷದ ಕಾರಣದಿಂದ ಆದ ಬದಲಾವಣೆಯಲ್ಲ. ಬದಲಾದ ಸ್ವರೂಪಕ್ಕೆ ತಕ್ಕಂತೆ ಆಚರಣೆಗಳಲ್ಲಾದ ವ್ಯತ್ಯಾಸಗಳಿಗೆ ತಕ್ಕಂತೆ ಭಾಷೆಯ ಮೂಲಕ ಸಾಂಸ್ಕೃತಿಕ ಸಾಮರಸ್ಯಕ್ಕೆ ಅಣಿಯಾಗುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ಗೋಪಾಲ ರಾವ್.

ಜೊತೆಗೆ, ಈ ಬದಲಾವಣೆ ಆಯಾ ಪಂಥಗಳ ಅಂತರಂಗಕ್ಕೆ ಮುಖ್ಯವಾಗುತ್ತದೆಯೇ ಹೊರತು, ಇಡೀ ಸಮುದಾಯಕ್ಕಲ್ಲ. ಶ್ರೀವೈಷ್ಣವ ದೇವಾಲಯಗಳು ತಮಿಳು ಭಾಷೆಯ ಪ್ರಭಾವದಿಂದ ಪೂಜಾ ವಿಧಿವಿಧಾನಗಳಲ್ಲಿ ತಮಿಳು ಭಾಷೆಗೆ ಆದ್ಯತೆ ನೀಡಿದರೂ, ಸ್ಥಳೀಯ ಸಂಸ್ಕೃತಿಯನ್ನು ಮರೆಯಲಿಲ್ಲ ಎನ್ನುತ್ತಾರೆ.

ಕರ್ನಾಟಕಕ್ಕೆ ರಾಮಾನುಜ ಪೂರ್ವದಲ್ಲೇ ಕಣ್ವ ಮತ್ತು ಕಾವೇರಿ ನದಿಗಳ ದಂಡೆಯಲ್ಲೇ ಸಾಗಿ ಬಂದು, ಅಗ್ರಹಾರಗಳನ್ನು ಸ್ಥಾಪಿಸಿ, ವೇದಾಧ್ಯಯನ ಮತ್ತು ದೇವಾಲಯಗಳ ನಿರ್ವಹಣೆಗೆ ತೊಡಗಿಕೊಂಡ ಜನರು ವೈಷ್ಣವದಿಂದ ಶ್ರೀವೈಷ್ಣವದತ್ತ ಹೇಗೆ ಬದಲಾದರು ಎಂಬುದನ್ನು ಶಾಸನಗಳ ಮೂಲಕ ವಿಶ್ಲೇಷಿಸುವ ಆಸಕ್ತಿದಾಯಕ ಕೆಲಸವನ್ನು ಷ. ಶೆಟ್ಟರ್ ಅವರು ವೈಷ್ಣವದಿಂದ ಶ್ರೀವೈಷ್ಣವಕ್ಕೆ ಎಂಬ ಅಧ್ಯಯನದ ಮೂಲಕ ಮಾಡಿದ್ದಾರೆ. ಶಾಸನಗಳು ನೀಡುವ ಇಂತಹ ಸೂಕ್ಷ್ಮ ವಿಚಾರಗಳ ಬಗೆಗೇ ಹೆಚ್ಚು ಚಿಂತಿಸುತ್ತಿದ್ದ ಷ. ಶೆಟ್ಟರ್ ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾಷಿಕ ಅಧ್ಯಯನಕ್ಕೆ ನೀಡಿರುವ ಮಹತ್ವದ ಕೊಡುಗೆಗಳ ಜೊತೆಗೆ ಈ ಕೃತಿಯೂ ಸೇರಿಕೊಳ್ಳುತ್ತದೆ.

About the Author

ಸುಕನ್ಯಾ ಕನಾರಳ್ಳಿ

ಕೊಡಗಿನಲ್ಲಿ ಜನಿಸಿದ ಸುಕನ್ಯಾ ಅವರು ವಿಜ್ಞಾನದಲ್ಲಿ ಪದವಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್ ಪಡೆದಿದ್ದಾರೆ. ಅನುವಾದ, ಮಹಿಳಾ ಸಾಹಿತ್ಯ, ಸಂಶೋಧನೆಯಲ್ಲಿ ಆಸಕ್ತಿ. ’ಅಲ್ಲಿಂದ ಇಲ್ಲಿಗೇ ಅವಳ ಕಥೆಗಳು’, ಅರುಂಧತಿ ರಾಯ್ ಅವರ ’ಡಿಸೆಂಬರ್‍ 13’, ಮಿಡತೆಗಳ ಬರವಿಗೆ ಕಿವಿಗೊಡುತ್ತಾ’ ಜೊತೆಗೆ ಮಿಲನ್ ಕುಂದೇರಾನ ಕಾದಂಬರಿ ’ಹೊರಲಾರದ ಗಾಳಿ ಭಾರ’ ಕನಾರಳ್ಳಿ ಅವರು ಅನುವಾದಿಸಿದ ಕೃತಿಗಳು. ವೈದೇಹಿ ಅವರ ಆಯ್ದ ಕತೆಗಳ ಇಂಗ್ಲಿಷ್ ಅನುವಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಕನಾರಳ್ಳಿಯವರ ಹಲವು ಕಥೆ, ಅನುವಾದ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ನ್ಯೂಜಿಲೆಂಡ್ ನಲ್ಲಿ ಇಂಗ್ಲಿಷ್ ಅಧ್ಯಾಪಿಕೆಯಾಗಿದ್ದಾರೆ. ...

READ MORE

Related Books