ಷೇಕ್ಸಪಿಯರ್‌ನ ಮೂರು ಮಹಾ ನಾಟಕಗಳು

Author : ಕೆ.ಎಸ್. ಭಗವಾನ್

Pages 467

₹ 150.00




Year of Publication: 2007

Synopsys

ಪ್ರಸಿದ್ಧ ನಾಟಕಕಾರ ಷೇಕ್ಸ್‌ಪಿಯರ್‌ ನ ಮೂರು ನಾಟಕಗಳನ್ನು ಪ್ರೊ. ಕೆ.ಎಸ್. ಭಗವನ್ ಅನುವಾದಿಸಿದ್ದಾರೆ. ಹ್ಯಾಮ್ಲೆಟ್, ಒಥೆಲೊ ಮತ್ತು ಮೆಕ್ಬೆತ್ ಕೃತಿಗಳಿಗೆ ಕನ್ನಡದ ಕಸುವು ನೀಡಿದ್ದಾರೆ.

ಡೋಲಾಯಮಾನ ಮನಸ್ಥಿತಿಯ ಹ್ಯಾಮ್ಲೆಟ್, ಅನುಮಾನದ ಬೆಂಕಿಯಲ್ಲಿ ಸಂಸಾರಕ್ಕೆ ಕೊಳ್ಳಿಯಿಟ್ಟ ಒಥೆಲೋ, ಮತ್ತು ತನ್ನ ದುರಾಸೆಯಿಂದಲೇ ಅಂತ್ಯ ಕಂಡ ಮೆಕ್ಬೆತ್ ಆಡುವ ಒಂದೊಂದು ಮಾತುಗಳನ್ನೂ ಕನ್ನಡದಲ್ಲಿ ಓದಿಕೊಳ್ಳುವುದು ವಿಭಿನ್ನ ಬಗೆಯ ಖುಷಿ ನೀಡುತ್ತದೆ. 

About the Author

ಕೆ.ಎಸ್. ಭಗವಾನ್
(14 July 1945)

ವಿಮರ್ಶಕ, ಅನುವಾದಕರಾದ ಕೆ.ಎಸ್.ಭಗವಾನ್ ಅವರು 14-07-1945ರಂದು ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿಯನ್ನೂ ಪಡೆದಿದ್ದಾರೆ. ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರಾದ ಭಗವಾನ್ ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು.  ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ಅವರು, ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅನುವಾದಕರಾಗಿ ಹೆಸರುವಾಸಿಯಾಗಿರುವ ಭಗವಾನ್ ಷೇಕ್ಸ್ ಪಿಯರ್ ನ ಒಂಬತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕೃತಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ...

READ MORE

Related Books