ನೂರೊಂದು ಪ್ರಾಚೀನ ಋಷಿಗಳ ಕಿರು ಪರಿಚಯ

Author : ಲಲಿತಾ ಶಾಸ್ತ್ರಿ

₹ 10.00




Year of Publication: 2013

Synopsys

ವಿಶ್ವದ ದರ್ಶನ ಶಾಸ್ತ್ರಗಳಲ್ಲಿ ಸರಿಸಾಟಿಯಿಲ್ಲದ, ಶ್ರೇಷ್ಠರಾದ ಋಷಿಗಳ ಪರಂಪರೆಯನ್ನು ನಮ್ಮ ದೇಶ ಹೊಂದಿದೆ. ಇಂತಹ ಪುಣ್ಯ ಪರಂಪರೆಯಿಂದ ನೂರೊಂದು ಜನರನ್ನು ಸ್ತ್ರೀ ಪುರುಷ ಭೇದವಿಲ್ಲದೆ ಆಯ್ದು, ಅವರ ವಿಷಯದಲ್ಲಿನ ಕಥೆಗಳನ್ನು ಅವರುಗಳ ಹೆಸರುಗಳ ಅಕರಾದಿಯಲ್ಲಿ, ಲೇಖಕರು ಅವರ ಪರಿಚಯವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಇದರ ಜೊತೆಗೆ ಅವರಲ್ಲಿ ಕೆಲವರು ಬರೆದಿರುವ ಗ್ರಂಥಗಳ ಕುರಿತ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.

About the Author

ಲಲಿತಾ ಶಾಸ್ತ್ರಿ
(05 March 1941)

ಲಲಿತಾ ಶಾಸ್ತ್ರಿ ಅವರು ಇಂಟರ್ ಮೀಡಿಯಟ್ ಶಿಕ್ಷಣ ಪಡೆದಿದ್ದರು 05-03-1941 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಾಯಣಶಾಸ್ತಿ, ತಾಯಿ ನರಸಮ್ಮ. ಕೃತಿಗಳು : ಪ್ರಶ್ನೆಗೊಂದು ಉತ್ತರ, ಡಾಕ್ಟರ್, ಪ್ರೇಮಬಂಧನ, ಭಿಕ್ಷುಕಿಯ ಮಗಳು (ಕಾದಂಬರಿ), ವಿವೇಕಾನಂದ (ಜೀವನಚರಿತ್ರೆ), ಉತ್ತರ ಅಮೆರಿಕಾದಲ್ಲಿ ಚಾತುರ್ಮಾಸ, ಶ್ರೀ ಲಲಿತ ಸಹಸ್ರನಾಮ ಸ್ತೋತ್ರಸಾರ ಸರ್ವಸ್ವ, ಕಠೋಪನಿಷತ್ (ಆಧ್ಯಾತ್ಮಿಕ) ‘ಸಂಕ್ಷಿಪ್ತ, ಲೇಡಿ ಜರ್ನಲಿಸ್ಟ್, ಭ್ರಮನಿರಸನ, ಚೀನಾ ದೇಶದ ಮಂತ್ರಿ ಮತ್ತು ಇತರ ಕಥೆಗಳು’ (ಶಿಶುಸಾಹಿತ್ಯ).  ಅವರು ರಚಿಸಿದ ಭಿಕ್ಷುಕಿಯ ಮಗಳು ಸಣ್ಣಕಥೆ ಕಿರುಚಿತ್ರವಾಗಿ ವಾರ್ಷಿಕ ಚಲನಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಹಾಗೂ  ಕೆನಡಾದ ಸ್ಟಾರ್‌ ಪ್ರಶಸ್ತಿ ಪಡೆದಿದೆ. ‘ಉತ್ತರ ಅಮೆರಿಕಾದಲ್ಲಿ ...

READ MORE

Related Books