ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ತೆಲುಗಿನ ಕವಿ ಡಾ. ಸಿ. ನಾರಾಯಣ ರೆಡ್ಡಿಯವರ ಕವನ ಸಂಕಲನವಾಗಿದೆ. ಈ ಅನುವಾದವೂ ಕಾವ್ಯ ಶಕ್ತಿಯಿಂದಲೇ ಕೂಡಿದೆ. ಪ್ರಕೃತಿಯನ್ನು ಆಸ್ವಾದಿಸಿದರಷ್ಟೇ ಸಾಲದು, ನಾವು ನಮ್ಮನ್ನು ಪ್ರಕೃತಿಗೇ, ಅದರ ಅನಂತ ಶಕ್ತಿಗೇ ಅರ್ಪಿಸಿಕೊಳ್ಳಬೇಕು. ಹಾಗಾದರೆ ಮಾತ್ರ ನಮ್ಮ ಸೀಮಿತೆಯು ಕಳೆದುಹೋಗಿ, ನಾವು ಅನಂತ ಆಕಾಶದಲ್ಲಿ ಹಾರಾಡುತ್ತಾ ಇರುತ್ತೇವೆ. ಕ್ಷಣಕ್ಕೊಂದು ಬಣ್ಣವನ್ನು ತಾಳುವ ಸಂಜೆಯ ಮೋಡಗಳಂತೆ ರಂಗುರಂಗಾಗಿ, ರಸವತ್ತಾಗಿ ನಮ್ಮಿಂದ ಕಾವ್ಯ ಹೊಮ್ಮುತ್ತದೆ. ಹೀಗೆ ಹಲವು ವಿಷಯಗಳನ್ನು ಕವಿಯು ಈ ಕವನ ಸಂಕಲನದಲ್ಲಿ ವಿವರಿಸಿದ್ದಾರೆ.
©2025 Book Brahma Private Limited.