‘ಮಕ್ಕಳ ಹೆಸರಿನ ಪ್ರಪಂಚ- 10, 000 ಹೆಸರುಗಳು’ ತೆಲುಗಿನ ಖ್ಯಾತ ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರ ಕೃತಿಯನ್ನು ಯತಿರಾಜ್ ವೀರಾಂಬುಧಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತಲಾ ಐದು ಸಾವಿರ ಹೆಸರುಗಳು ನಿಮ್ಮ ಆಯ್ಕೆಗೆ. ಅತಿ ಸರಳ ಹೆಸರಿನಿಂದ ಅತ್ಯಂತ ಅಪರೂಪದ ಹೆಸರಿನವರೆಗೆ. ಮಗುವಿಗೆ ಒಂದು ಸುಂದರ ಹೆಸರು. ನೀವು ಹತ್ತಾರು ಕಡೆ ಹುಡುಕಬೇಕಿಲ್ಲ. ಈ ಪುಟ್ಟ ಹೊತ್ತಗೆ ಒಂದು ಸಾಕು. ಕತೆ, ಕಾದಂಬರಿ, ನಾಟಕ, ವ್ಯಕ್ತಿತ್ವ ವಿಕಸನ ಲೇಖನಮಾಲೆ ಬರೆದ, ಮಕ್ಕಳಿಗೆ ಮತ್ತು ದೊಡ್ಡವರಿಗೆ ವ್ಯಕ್ತಿತ್ವ ವಿಕಸನ ತರಗತಿಗಳನ್ನು ನಡೆಸುವ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಡಾ. ಯಂಡಮೂರಿ ವೀರೇಂದ್ರನಾಥ್ ಅವರ ವಿಶಿಷ್ಟ ಕೃತಿಯನ್ನು ಯತಿರಾಜ್ ವೀರಾಂಬುಧಿ ಅವರು ಕನ್ನಡಕ್ಕೆ ತಂದಿದ್ದಾರೆ.
©2025 Book Brahma Private Limited.