ಕ್ರಿ.ಶ.1648 ರಿಂದ 1715 ರವರೆಗಿನ ಇತಿಹಾಸವನ್ನು ಒಳಗೊಂಡ ಈ ಸಂಪುಟವು 14ನೇ ಲೂಯಿಯನ್ನು ಕೇಂದ್ರವಾಗಿಟ್ಟುಕೊಂಡು ರಚನೆಗೊಂಡಿದೆ. ಫ್ರಾನ್ಸಿನ ಸುತ್ತಮುತ್ತಲ ಸ್ಪೇನ್, ಇಂಗ್ಲೆಂಡ್, ಜರ್ಮನಿ, ಪ್ರಷ್ಯಾ, ರಷ್ಯಾ ಮುಂತಾದ ದೇಶಗಳಲ್ಲಿ ಸಮನಾಂತರವಾಗಿ ನಡೆದ ರಾಜಕೀಯ ಕ್ರಾಂತಿ, ನಾಗರಿಕತೆಯ ವಿಕಾಸವಾದ, ಸರ್ಕಾರಗಳ ಪಾತ್ರ, ಮತ್ತು ಕೃಷಿ, ಕೈಗಾರಿಕೆ, ವಾಣಿಜ್ಯ, ಧರ್ಮ, ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ ಮತ್ತು ತತ್ವಜ್ಞಾನಗಳನ್ನು ಹಾಗೂ ಮೋಲಿಯೇರ್, ಮಿಲ್ಟನ್, ಐಸಾಕ್ ನ್ಯೂಟನ್, ಕ್ರಾಮ್ ವೆಲ್ ಮುಂತಾದ ಮಹಾನ್ ವ್ಯಕ್ತಿಗಳ ಕೊಡುಗೆಗಳು, ರಾಜಕೀಯ ಏಳುಬೀಳುಗಳು, ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟಂಟರ ನಡುವಿನ ಘರ್ಷಣೆ ಮುಂತಾದ ಪ್ರಮುಖ ವಿಷಯಗಳ ಕುರಿತ ಮಾಹಿತಿಯನ್ನು ಈ ಕೃತಿಯೂ ವಿವರಿಸುತ್ತದೆ.
©2024 Book Brahma Private Limited.