19 ಮತ್ತು 20ನೇ ಶತಮಾನದಲ್ಲಿ ಬದುಕಿದ್ದ ಜಾರ್ಜ್ ಬರ್ನಾರ್ಡ್ ಷಾ ಇಂಗ್ಲಿಷ್ ಸಾಹಿತ್ಯದಲ್ಲಿ, ಅದರಲ್ಲಿಯೂ ನಾಟಕಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರು. ಅವರ ಪಿಗ್ಮೇಲಿಯನ್ ನಾಟಕವನ್ನು ಅದೇ ಹೆಸರಿನಲ್ಲಿ ವಿ. ಸೀತಾರಾಮಯ್ಯ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ನಾಟಕದಲ್ಲಿ ಹುಟ್ಟಿಗಿಂತ ಶಿಕ್ಷಣ ದೊಡ್ಡದು ಎಂಬ ತತ್ತ್ವ ಮುನ್ನೆಲೆಗೆ ಬಂದಿದೆ. ಹೂ ಮಾರುವವಳನ್ನು ಸುಸಂಸ್ಕೃತವಾಗಿ ರೂಪಿಸುವ ಪ್ರಯತ್ನ ಮನತಟ್ಟುತ್ತದೆ. ಪುರುಷ ಪಾತ್ರಗಳಿಗಿಂತ ಸ್ತ್ರೀಪಾತ್ರಗಳಿಗಿರುವ ಶಕ್ತಿ, ರಂಜನಾ ವಿಲಾಸ ಮೇಲುಗೈಯಾಗುವುದು ಕೃತಿಯ ವಿಶೇಷ.
©2025 Book Brahma Private Limited.