ಖ್ಯಾತ ಅಣುವಿಜ್ಞಾನಿ ಡಾ. ರಾಜಾ ರಾಮಣ್ಣ ಅವರ ಸಂಸ್ಕೃತ ಅಂಡ್ ಸೈನ್ಸ್ ಎಂಬ ಉಪನ್ಯಾಸದ ಪುಸ್ತಕ ರೂಪವಿದು. ಈ ಕೃತಿಯನ್ನು ಎ.ವಿ.ನರಸಿಂಹ ಮೂರ್ತಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕೇವಲ ತತ್ತ್ವಶಾಸ್ತ್ರ ಮತ್ತು ಧಾರ್ಮಿಕ ವಿಷಯಗಳ ಭಾಷೆಯಾಗಿಯಷ್ಟೇ ಅಲ್ಲದೆ, ಸಂಸ್ಕೃತವು ಅತ್ಯಂತ ಸೂಕ್ಷ್ಮವಾದ, ಕ್ಲಿಷ್ಟವಾದ ಗಣಿತಶಾಸ್ತ್ರದ ತಾಂತ್ರಿಕ ವಿಷಯಗಳೂ ಸೇರಿದಂತೆ ಎಲ್ಲಾ ವೈಜ್ಞಾನಿಕ ವಿಷಯಗಳನ್ನೂ ಸಮರ್ಥವಾಗಿ ನಿಭಾಯಿಸಬಲ್ಲುದು ಮತ್ತು ತಿಳಿಸಬಲ್ಲುದು ಎಂಬುದನ್ನು ಲೇಖಕರು ವಿವರಿಸಿದ್ದಾರೆ. ಅಲ್ಲದೆ ಸಂಸ್ಕೃತ ಭಾಷೆಯ ಲಿಪಿಗಳನ್ನು ಸುಧಾರಿಸಿ ಅವುಗಳನ್ನು ಕಂಪ್ಯೂಟರ್ ಮೂಲಕ ಉಪಯೋಗಿಸಿ ಅತ್ಯಂತ ಲಾಭವನ್ನು ನಾವು ಪಡೆಯಬಹುದು ಎಂಬುದರ ಬಗ್ಗೆ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.
©2025 Book Brahma Private Limited.