ಅತೋಲ್ ಫ್ಯುಗಾರ್ಡ್ ದಕ್ಷಿಣ ಆಫ್ರಿಕಾದ ಪ್ರಸಿದ್ಧ ನಾಟಕಕಾರ. ಆತನ ’ದ ವ್ಯಾಲಿ ಸಾಂಗ’ ಎಂಬ ಕೃತಿಯ ಕನ್ನಡ ಅನುವಾದ ಇದು. ಆತನ ಸಮಕಾಲೀನ ಜನ ಜೀವನವನ್ನು ಬಿಂಬಿಸುವ ಈ ನಾಟಕ ಮನಕಲಕುವಂತಹದ್ದಾಗಿದೆ. ಎರಡು ತಲೆಮಾರುಗಳ ಆಲೋಚನೆಗಳ ನಡುವೆ ಇರುವ ಅಂತರವನ್ನು ಇದು ವಿವರಿಸುತ್ತದೆ. ಬದಲಾವಣೆ ಬಯಸದ ಹಳೆಯ ತಲೆಮಾರು, ಬದಲಾವಣೆಯೇ ಬದುಕು ಎನ್ನುವ ತರುಣ ಜನಾಂಗ ಇವುಗಳ ಸಂಘರ್ಷ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಜೊತೆಗೆ ಹಳ್ಳಿಗಳ ಮೇಲೆ ಆಗುತ್ತಿದ್ದ ಮತ್ತು ಆಗುತ್ತಿರುವ ನಗರೀಕರಣ ಪ್ರಭಾವ ಇಲ್ಲಿ ಕಾಣಬರುತ್ತದೆ. ಎರಡು ಮೂರು ಪಾತ್ರಗಳ ಮೂಲಕವೇ ತನ್ನ ಉದ್ದೇಶವನ್ನು ಸಾಧಿಸಿರುವುದು, ನಾಟಕಕಾರನೇ ಇಲ್ಲಿನ ಒಂದು ಪಾತ್ರವಾಗಿ ನಾಟಕಕ್ಕೆ ಬೇರೊಂದು ಆಯಾಮವನ್ನು ನೀಡಿರುವುದು ಕೃತಿಯ ಹೆಚ್ಚುಗಾರಿಕೆ.
©2025 Book Brahma Private Limited.