ಮಲಯಾಳಂ ಲೇಖಕ ಉಣ್ಣಿಕೃಷ್ಣನ್ ತಿರುವಾಯಿಯೋಡ್ ಅವರ 'ದೃಕ್ಸಾಕ್ಷಿ' ಕೃತಿಯನ್ನು ಕೆ.ಕೆ.ನಾಯರ್ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
1984ರಲ್ಲಿ ತನ್ನ ಅಂಗರಕ್ಷಕರಿಂದಲೇ ಅಂದಿನ ಪ್ರಧಾನಿ ಇಂದಿರಾಗಾಂಧಿ ದುರ್ಮರಣಕ್ಕೆ ಈಡಾದರು. ನಂತರ ಸ್ವತಂತ್ರ ಭಾರತದಲ್ಲಿ ಕಂಡು ಕೇಳರಿಯದ ಹತ್ಯಾಕಾಂಡ ನಡೆಯಿತು. ಅದಕ್ಕೆ ಕಾರಣವಾದ ಐತಿಹಾಸಿಕ, ಧಾರ್ಮಿಕ ವ್ಯವಸ್ಥೆಗಳ ವಿಶ್ಲೇಷಣೆ ಕೃತಿಯಲ್ಲಿದೆ. ಇದಕ್ಕೆ ಅಧಿಕಾರಿಗಳು ನೀಡಿದ ಕುಮ್ಮಕ್ಕು ಸರ್ಕಾರದ ನಿಷ್ಕ್ರಿಯತೆ, ಇವೆಲ್ಲಕ್ಕೂ ಸಾಕ್ಷಿಯಾಗಿದ್ದ ವ್ಯಕ್ತಿಯೊಬ್ಬನ ನೈಜ, ವಸ್ತುನಿಷ್ಠಾತ್ಮಕ ವಿವರಣೆಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
©2025 Book Brahma Private Limited.