ಮೂಲಕರ್ತೃ ವೃಂದಾವನ್ ಲಾಲ್ ವರ್ಮ ಅವರು ಹಿಂದಿಯ ಸುಪ್ರಸಿದ್ದ ಕಾದಂಬರಿಕಾರರು. ಅವರ ಕಾದಂಬರಿಗಳು ಹಲವಾರು ಭಾಷೆಗಳಿಗೆ ಅನುವಾದವಾಗಿವೆ.
ದೂರದರ್ಶನದಲ್ಲಿಯೂ ಪ್ರಸಾರವಾದ ಈ ಮೃಗನಯನಿ ಕಾದಂಬರಿಯನ್ನು ಹಿಂದಿ ಕನ್ನಡ ಅನುವಾದ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಮ.ಸು. ಕೃಷ್ಣಮೂರ್ತಿಯವರು.
ಹಳ್ಳಿಯ ಹುಡುಗಿ, ಧೈರ್ಯ, ಸಾಹಸ, ಬಿಲ್ಲುವಿದ್ಯೆಗಳಿಗೆ ಹೆಸರಾಗಿದ್ದ ಹುಡುಗಿ ಮೃಗನಯನಿ ರಾಜ ಮಾನಸಿಂಹನ ಪತ್ನಿಯಾಗಿ ಅರಮನೆ ಸೇರಿ, ಅಲ್ಲಿ ಅವನ ಇತರ ಪತ್ನಿಯರ ಕಾಟದಿಂದ ನೊಂದರೂ ಧೈರ್ಯವಾಗಿ ರಾಣಿಗೆ ತಕ್ಕ ವಿದ್ಯೆ, ಕಲೆಗಳನ್ನು ಕಲಿತು ಬದುಕನ್ನು ಧೀಮಂತವಾಗಿಸಿದ ಕಥೆಯನ್ನು ಕೃತಿ ಒಳಗೊಂಡಿದೆ.
©2025 Book Brahma Private Limited.