ಲೌಕಿಕ ಕಾನೂನು, ನೀತಿ ಮೊದಲಾದ ವ್ಯವಹಾರಗಳಲ್ಲಿ ಮೇರುಪರ್ವತದಂತಿದ್ದ ನಾನಿ ಫಾಲ್ಕಿವಾಲಾ ಅವರು ಭಾರತದ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಎಷ್ಟು ವಿಚಾರಕರಾಗಿದ್ದರು, ವಿಶ್ಲೇಷಣಾಶೀಲರಾಗಿದ್ದರು ಎಂಬುದನ್ನು ಅವರ ಈ ಪುಟ್ಟ ಕೃತಿ ನಮಗೆ ತೋರಿಸುತ್ತದೆ. ಕೇವಲ ಲೌಕಿಕ ಬುದ್ಧಿವಂತಿಕೆ ನಿರರ್ಥಕವೆಂಬುದನ್ನು, ನಾವು ಜಡವೆಂದು ಹೇಳುವ ಜಗತ್ತಿನಲ್ಲಿ ಹೇಗೆ ಚೈತನ್ಯವು ಅದಮ್ಯವಾಗಿ ಮೆರೆಯುತ್ತಿದೆ ಎಂಬುದನ್ನು, ಭಾರತೀಯ ಧರ್ಮ ಮತ್ತು ಸಂಸ್ಕೃತಿ ಎಷ್ಟು ಅಮೂಲ್ಯವಾದುದೆಂಬುದನ್ನೂ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಈ ಕೃತಿಯನ್ನು ಬಿ.ಎಸ್.ರುಕ್ಕುಮ್ಮ ರವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
©2025 Book Brahma Private Limited.