ಭರತ್ ಜಂಗಮ್ ನೇಪಾಳದ ಪ್ರಮುಖ ಕಾದಂಬರಿಕಾರ. ಅವರ ’ಕೋಲಾಸೂರ್” ಎಂಬ ಕಾದಂಬರಿ ಇಂಗ್ಲಿಷ್ನಲ್ಲಿ ’ದ ಬ್ಲಾಕ್ ಸನ್’ ಹೆಸರಿನಲ್ಲಿ ಅನುವಾದಗೊಂಡಿದೆ. ಇದನ್ನು ಕನ್ನಡಕ್ಕೆ ತಂದಿರುವುದು ಟಿ. ಎಸ್. ದಕ್ಷಿಣಾ ಮೂರ್ತಿ ಅವರು.
ಕಾದಂಬರಿ ನಿರಂಕುಶ ಪ್ರಭುತ್ವದ ಕರಾಳ ಮುಖಗಳನ್ನು ಬಿಚ್ಚಿಡುವ ಕೆಲಸ ಮಾಡಿದೆ. ವ್ಯಾಪಾರಿಗಳು, ಸಮಾಜ ಸೇವಕರೆಂದು ಹೊರಗೆ ಕರೆಸಿಕೊಳ್ಳುವವರು, ಜನರ ಮುಗ್ಧತೆಯನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹೇಗೆ ಬಳಸಿಕೊಳ್ಳುತ್ತಾರೆ, ಕಾನೂನನ್ನು ತಮಗೆ ಅನುಕೂಲವಾಗುವಂತೆ ಹೇಗೆ ಬಗ್ಗಿಸಿಕೊಳ್ಳುತ್ತಾರೆ ಎಂಬುದರ ವಿವರಗಳು ಕೃತಿಯಲ್ಲಿವೆ.
©2025 Book Brahma Private Limited.