ಭೌಗೋಳಿಕವಾಗಿ ಅತ್ಯಂತ ದೊಡ್ಡ ಹರವನ್ನು ಹೊಂದಿರುವ ನಮ್ಮ ದೇಶವನ್ನು ಅನ್ಯ ದೇಶೀಯರು ಇಡಿಯಾಗಿ ಒಂದೇ ದೇಶವೆಂದು ಪರಿಗಣಿಸದೆ ಹಲವು ದೇಶಗಳ ಭೂ ಭಾಗವೆನ್ನುತ್ತಾರೆ. ಆದರೆ, ನಾವು ದೇಶದ ಯಾವುದೇ ಭಾಗದಲ್ಲಿದ್ದರೂ, ನಮ್ಮ ಭಾಷೆ, ಆಚಾರ ಮೊದಲಾದವು ಬೇರೆ ಬೇರೆಯಾಗಿದ್ದರೂ, ಪರಂಪರೆಯಿಂದ ಈ ಭೂಖಂಡವು ಅಖಂಡವೆಂಬ ಭಾವ ನಮ್ಮ ರಕ್ತದಲ್ಲಿ ಹರಿದುಬಂದಿದೆ. ಇಲ್ಲಿನ ಧರ್ಮ, ಕಾವ್ಯ, ವಿಜ್ಞಾನ ಇವು ಈ ಅಖಂಡತೆಯನ್ನು ಆರಾಧಿಸಲು ಹೇಗೆ ಸಹಾಯಮಾಡುತ್ತವೆ ಎಂಬುದನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೆ, ಪ್ರಾಕೃತಿಕ ಘಟನೆಗಳಾದ ಹಿಂಗಾರು ಮತ್ತು ಮುಂಗಾರುಗಳು ಹೇಗೆ ಈ ಭೂಖಂಡದ ಮೇಲೆ ತಮ್ಮ ವೈಶಿಷ್ಟ್ಯವನ್ನು ಒತ್ತಿ ಅಲ್ಲಿರಬಹುದಾಗಿದ್ದ ಭೇದಭಾವಗಳನ್ನೆಲ್ಲಾ ಕೊಚ್ಚಿ ಹಾಕಿದೆ ಎಂಬುದರ ಕುರಿತ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.