ನಮಗೆ ನಮ್ಮ ಪ್ರಸ್ತುತ ಜಗತ್ತು ಹಿಂದೆಂದಿಗಿಂತಲೂ ಘೋರವಾಗಿ, ಅನುಭವಿಸಲು ಅಸಾಧ್ಯವಾಗಿರುವಂತೆ ಕಾಣುವುದು ಸಹಜ. ಅಂತಹ ಸಮಯದಲ್ಲಿ ನಾವು ನಿಜವಾದ ಸುಖವನ್ನು ಅರಸುತ್ತಾ ಹೋಗುವುದೂ ಅಷ್ಟೇ ಸಹಜ. ಆದರೆ ಆ ದಾರಿಯಲ್ಲಿ ಗೊಂದಲಗಳಿವೆ. ಇದಕ್ಕೆ ಅಗತ್ಯವಾದ ಒಳಗಣ್ಣನ್ನು ತೆರೆಸುವ ಪ್ರಯತ್ನವನ್ನು ಕೃತಿಕಾರ ವಿಜಯ್ ಆನಂದ್ ಮುಡಗಾಂವ್ಕರ್ ಮಾಡಿದ್ದಾರೆ. ಈ ಕೃತಿಯನ್ನುಕೊ.ಸು.ನರಸಿಂಹಮೂರ್ತಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಮೂಲಭೂತವಾಗಿ ಆವಶ್ಯಕವಾದ ಅಂತರೀಕ್ಷಣೆ, ಮಾನಸಿಕ ಸಮತೋಲನೆ, ಮನಸ್ಸಿನ ಮುಂದೆ ಇಟ್ಟುಕೊಳ್ಳಬೇಕಾದ ಆದರ್ಶ ಮತ್ತು ಗುರಿ ಇವುಗಳ ಬಗ್ಗೆ ಲೇಖಕರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
©2024 Book Brahma Private Limited.