ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ತಮ್ಮ ಇಡೀ ಜೀವಮಾನವನ್ನೇ ಮುಡಿಪಾಗಿಟ್ಟಿದ್ದ 23ನೆಯ ಪೋಪ್ ಜಾನ್ ಪಾಲ್ ಅವರು, ವಿಶ್ವದಲ್ಲಿ ಶಾಂತಿಗಾಗಿ ಎಲ್ಲಾ ಬಿಷಪ್ ಗಳಿಗೆ ಕಳುಹಿಸಿದ ಪ್ರಮುಖವಾದ ಲೇಖನಗಳನ್ನು ಈ ಕೃತಿಯಲ್ಲಿ ಕೊಡಲಾಗಿದೆ. ಈ ಲೇಖನದಲ್ಲಿ ಸತ್ಯ, ನ್ಯಾಯ, ಅನುಕಂಪ, ಸ್ವಾತಂತ್ರ್ಯ ಎಂಬ ನಾಲ್ಕು ತತ್ತ್ವಗಳ ಮೇಲೆ ಹೇಗೆ ವಿಶ್ವ ಶಾಂತಿಯನ್ನು ಸ್ಥಾಪಿಸಬಹುದು ಎಂಬ ವಿಷಯಗಳ ಕುರಿತ ವಿವರಣೆಗ ಳನ್ನು ಕಾಣಬಹುದಾಗಿದೆ. ವಿಶ್ವಶಾಂತಿಗೆ ಮಾನವ ಸಮಾಜದಲ್ಲಿನ ಸುವ್ಯವಸ್ಥೆಗಳು, ವ್ಯಕ್ತಿ ಮತ್ತು ಸಾರ್ವಜನಿಕ ಪ್ರಾಧಿಕಾರಗಳು, ಸರಕಾರಗಳ ನಡುವಿನ ಸಂಬಂಧಗಳು, ರಾಜಕೀಯ ಸಂಘಟನೆಗಳು, ವಿಶ್ವಸಂಸ್ಥೆಯ ಸಂಘಟನೆ ಇವೆಲ್ಲಾ ಹೇಗೆ ಪೂರಕವಾಗಿ ಕೆಲಸ ಮಾಡಬಹುದು ಎಂಬುದನ್ನು ಸರಳವಾಗಿ ಈ ಕೃತಿಯಲ್ಲಿ ವಿವರಣೆಗಳನ್ನು ನೀಡಲಾಗಿದೆ.
©2025 Book Brahma Private Limited.