‘ಕಾಣದ ಲೋಕ ವೈರಸ್ ವೃತ್ತಾಂಶ’ ಕೊಳ್ಳೆಗಾಲ ಶರ್ಮ ಅವರು ಅನುವಾದಿಸಿರುವ ಕೃತಿಯಾಗಿದೆ. ವೈರಸ್ಸುಗಳು ಭೂಮಿಯ ಮೇಲಿನ ಮಾನವ ನಾಗರೀಕತೆಯನ್ನು ಹೇಗೆಲ್ಲ ರೂಪಿಸಿವೆ ಎಂಬುದನ್ನು ಈಗೀಗಷ್ಟೆ ಅರಿಯುತ್ತಿದ್ದೇವೆ. ಪ್ರಣಯ್ ಲಾಲರ 'ಕಾಣದ ಲೋಕ... ನಮ್ಮಲ್ಲಿ ಪ್ರತಿಯೊಬ್ಬರನ್ನೂ ಬಾಧಿಸುವ ಶಕ್ತಿಯುತವಾದ ಸುಪ್ತಬಲಗಳ ಇಣುಕು ನೋಟವೊಂದನ್ನು ನೀಡುತ್ತದೆ. ಅದ್ಭುತ ಹಾಗೂ ಅರಿವು ನೀಡುವ ನೋಟ.” ಸಿದ್ದಾರ್ಥ ಮುಖರ್ಜಿ, ಸಾಹಿತ್ಯೇತರ ಕೃತಿಗಾಗಿ 2011ರ ಸಾಲಿನ ಪುಲಿಟ್ಲರ್ ಪ್ರಶಸ್ತಿ ವಿಜೇತ “ನಮ್ಮಲ್ಲಿ ಬಹಳಷ್ಟು ಜನರಿಗೆ ವೈರಸ್ಸು ಎಂದರೆ ರೋಗಕಾರಕ. ಆದರೆ ನಿಸರ್ಗದಲ್ಲಿ ಅತ್ಯಂತ ವೈವಿಧ್ಯವಾಗಿ ಹಾಗೂ ಸಮೃದ್ಧವಾಗಿರುವ ಜೀವಿಗಳು. ಜೀವ ಹಾಗೂ ನಿರ್ಜೀವದ ಸೀಮೆಯಲ್ಲಿ ಇವೆ. ಈ ಸ್ವಾರಸ್ಯಕರವಾದ ಹಾಗೂ ಸುಂದರ ಚಿತ್ರಗಳಿಂದ ಅಲಂಕೃತವಾದ ಪುಸ್ತಕದಲ್ಲಿ ಪ್ರಣಯ್ ಲಾಲ್ ಈ ವೈರಸ್ಸುಗಳ ಲೋಕದಲ್ಲೊಂದು ಸುತ್ತು ಕರೆದೊಯ್ಯುತ್ತಾರೆ. ಹಾದಿಯಲ್ಲಿ ಅವುಗಳ ಚರಿತ್ರೆ, ಹಾಗೂ ನಿಸರ್ಗದಲ್ಲಿ ಅವು ವಹಿಸುವ ಅಮೋಘ ಪಾತ್ರಗಳನ್ನು ಪರಿಚಯಿಸಿದ್ದಾರೆ.
©2025 Book Brahma Private Limited.