ಈ ಸಂಪುಟವು 1558 ರಲ್ಲಿ ಎಲಿಜಬೆತ್ ಪಟ್ಟಕ್ಕೆ ಬರುವುದರಿಂದ ಪ್ರಾರಂಭವಾಗಿ 1650 ರಲ್ಲಿ ತತ್ವಜ್ಞಾನಿ ಡೆಕಾರ್ಟೆಯ ನಿಧನದವರೆಗೆ ಧಾರ್ಮಿಕ ಸಂಘರ್ಷ ಮತ್ತು ವೈಜ್ಞಾನಿಕತೆಯ ಪ್ರಕ್ಷುಬ್ಧ ಶತಮಾನವನ್ನು ಸಮೀಕ್ಷಿಸುತ್ತದೆ. ಎಲಿಜಬೆತ್ ರಾಣಿಯ ಆಡಳಿತ, ಇಂಗ್ಲೀಷರ ಜನಜೀವನ, ಸಂಗೀತ, ಕಲೆ ಹಾಗೂ ಸ್ಪೆನ್ಸರ್, ಮಾರ್ಲೋ, ಷೇಕ್ಸ್ ಪಿಯರ್, ಬೇಕನ್ ರ ವಿವರ, ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟೆಂಟ್ ಧರ್ಮಶ್ರದ್ಧೆಗಳ ಸಂಘರ್ಷ, ಸ್ಪೇನಿನ ಏಳುಬೀಳು, ಸ್ಪ್ಯಾನಿಷ್ ಸಾಹಿತ್ಯದ ಸುವರ್ಣಯುಗ, ನೆದರ್ಲ್ಯಾಂಡಿನ ಬಂಡಾಯ, ಡೆನ್ಮಾರ್ಕ್, ಸ್ವೀಡನ್, ರಷ್ಯಾ ದೇಶಗಳ ಸಾಂಸ್ಕೃತಿಕ ಜನಜೀವನ, ಕಲಾವಿದರ ಕೊಡುಗೆ, ಗೆಲಿಲಿಯೋ ಯುಗದ ವಿಜ್ಞಾನ ಮತ್ತು ತತ್ವಶಾಸ್ತ್ರದ ಮರುಹುಟ್ಟಿನ ಕುರಿತ ವಿವರಗಳನ್ನು ಈ ಸಂಪುಟವು ಒದಗಿಸುತ್ತದೆ.
©2024 Book Brahma Private Limited.