ಕ್ರಿ.ಶ.1789 ರಿಂದ 1815 ರವರೆಗಿನ ಯೂರೋಪಿನ ಇತಿಹಾಸವನ್ನು ಈ ಸಂಪುಟವು ತಿಳಿಸುತ್ತದೆ. ಈ ಸಂಪುಟವು ನೆಪೋಲಿಯನ್ನನನ್ನು ಕೇಂದ್ರವಾಗಿರಿಸಿಕೊಂಡಿದ್ದರೂ, ಆ ಮೂಲಕ ಆತನ ಕಾಲಮಾನದ ಕಲೆ, ಸಾಹಿತ್ಯ, ಸಂಗೀತ, ನಾಟಕ, ವಿಜ್ಞಾನ, ತತ್ವಶಾಸ್ತ್ರ ಇವುಗಳ ಉತ್ತುಂಗ ಸ್ಥಿತಿ, ಪ್ರೆಂಚ್ ಕ್ರಾಂತಿ, ಕ್ರಾಂತಿಯ ಪರಿಣಾಮ, ಸಾಹಿತ್ಯದ ಮೇರು ಶಿಖರಗಳಾದ ವರ್ಡ್ಸ್ ವರ್ತ್, ಕೊಲ್ರಿಡ್ಜ್, ಶೆಲ್ಲಿ, ಬೈರನ್, ಮುಂತಾದವರ ಸಾಹಿತ್ಯ ರಚನೆಯನ್ನು ವಿವರಿಸುತ್ತದೆ. ಹಾಗೆಯೇ ನೆಪೋಲಿಯನ್ನನ ಆಡಳಿತಕ್ಕೆ ಒಳಪಟ್ಟಿದ್ದ ದೇಶಗಳ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು, ಇಂಗ್ಲಿಷ್ ಅಧಿಕಾರ ಮತ್ತು ವೈಭವ, ಪುನರುಜ್ಜೀವನ ಹೊಂದಿದ ಫ್ರಾನ್ಸಿನ ಕ್ರಾಂತಿ, ರಷ್ಯಾದ ಹೋರಾಟ, ಆಸ್ಟ್ರಿಯಾದ ಪತನ ಮತ್ತು ಮಹಾನ್ ಸರ್ವಾಧಿಕಾರಿ ನೆಪೋಲಿಯನ್ ಬೋನಪಾರ್ಟೆ ಯುಗದ ಸುದೀರ್ಘ ಸಮರ, ಕಲೆ, ಸಂಸ್ಕೃತಿ ಮತ್ತು ತಾತ್ವಿಕತೆಯ ನಿರೂಪಣೆಯನ್ನು ಈ ಸಂಪುಟವು ಒಳಗೊಂಡಿದೆ.
©2025 Book Brahma Private Limited.