ಆರ್.ಎಲ್. ಸ್ಟೀವನ್ಸನ್ ಅವರ ಡಾ. ಜೆಕಿಲ್ ಅಂಡ್ ಹೈಡ್ ಎಂಬ ಸುಪ್ರಸಿದ್ಧ ಕೃತಿಯ ಅನುವಾದವಾಗಿದೆ ಇದು. ಕನ್ನಡದ್ದೇ ಕೃತಿ ಎನ್ನುವಷ್ಟರ ಮಟ್ಟಿಗೆ ಆನಂದ ಅವರು ಚಂದ ಅನುವಾದ ಮಾಡಿದ್ದಾರೆ.
ಲಗಾಮು ಇಲ್ಲದ ತುಂಟ ಕುದುರೆಯಂತೆ ಗೊತ್ತುಗುರಿಯಿಲ್ಲದೆ ಓಡುವ ಮಾನವನ ಮನಸ್ಸು ಮತ್ತು ಅವನು ತಾನು ಹೊರ ಜಗತ್ತಿಗೆ ಹೇಗೆ ಕಾಣಬೇಕು, ಮನಸ್ಸಿನ ಕಾಮನೆಗಳನ್ನು ಬಚ್ಚಿಟ್ಟು ಸಭ್ಯನಾಗಿ ಕಾಣಬೇಕು ಎಂಬ ಅವನ ಡಾಂಭಿಕತೆ ಇವೆರಡರ ತಾಕಲಾಟ, ಇದರಲ್ಲಿ ಅವನ ಬುದ್ಧಿಶಕ್ತಿ ಕೂಡ ಶಾಮೀಲಾಗಿ ಹೇಗೆ ಅವನ ಜೀವನವನ್ನೇ ಬಲಿತೆಗೆದುಕೊಳ್ಳುತ್ತದೆ ಎಂಬ ದಾರುಣಮಯ ಘಟನೆಗಳ ಸರಮಾಲೆ ಈ ಕೃತಿಯ ಪ್ರಮುಖ ವಸ್ತುವಾಗಿದೆ.
©2025 Book Brahma Private Limited.