ಭಾರತದ ಇತಿಹಾಸದ ನಿರ್ಣಾಯಕ ಕಾಲಾವಧಿಗಳನ್ನು ವಿಶ್ಲೇಷಿಸಿ ಸರ್ದಾರ್ ಫಣಿಕ್ಕರ್ ಅವರು ನೀಡಿದ ಮೂರು ಉಪನ್ಯಾಸಗಳು ಸೇರಿ ಈ ಕೃತಿ ರಚನೆಯಾಗಿದೆ. ಈ ಕೃತಿಯನ್ನು ಎಚ್.ಗಣೇಶ್ ಐತಾಳ್ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸರ್ದಾರ್ ಫಣಿಕ್ಕರ್ ಅವರು ಭಾರತೀಯ ಇತಿಹಾಸದ ಬಗ್ಗೆ ಹೊಸ ದೃಷ್ಟಿಯಲ್ಲಿ ಮರುಪರಿಶೀಲನೆ ನಡೆಸಿದ್ದಾರೆ. ಈ ಉಪನ್ಯಾಸಗಳಲ್ಲಿ, ಅವರು ಸಂಸ್ಕೃತ ಭಾಷೆ ಮತ್ತು ಸಾಹಿತ್ಯಗಳು ಜನತೆಯ ಮಧ್ಯೆ ಸಾಧಿಸಿದ ಒಗ್ಗಟ್ಟು, ಇಸ್ಲಾಂ ವಿರೋಧಿ ಪ್ರತಿಭಟನೆಗಳು ಹಾಗೂ ಹಿಂದೂ ಪುನರುತ್ಥಾನ, ಅಲ್ಲದೆ ಭಾರತೀಯರ ಮೇಲೆ ಪ್ರಭಾವ ಬೀರಿದ ವಿದೇಶಿ ನಾಗರಿಕತೆ ಮತ್ತು ಇಂಗ್ಲಿಷ್ ಭಾಷೆ ಇವುಗಳ ಬಗ್ಗೆ ವಿವರಗಳು ಈ ಕೃತಿಯಲ್ಲಿದೆ.
©2025 Book Brahma Private Limited.