ಶತಮಾನಗಳು ಕಳೆದರೂ ಭಾರತದ ಚರಿತ್ರೆಯಲ್ಲಿ ಹೊಳೆಯುತ್ತಲೇ ಇರುವ ಸಾಮ್ರಾಜ್ಯವಾದ ವಿಜಯನಗರವನ್ನು ಕುರಿತು ಡಾ. ನೇಲಟೂರಿ ವೆಂಕಟರಮಣಯ್ಯನವರು ತೆಲುಗಿನಲ್ಲಿ ಕೃತಿಯನ್ನು ರಚಿಸಿದ್ದಾರೆ. ಇದನ್ನು ಗುರುಮೂರ್ತಿ ಪೆಂಡಕೂರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಐತಿಹಾಸಿಕ ವಿಚಾರಗಳನ್ನು ಪ್ರಾಮಾಣಿಕವಾಗಿ ಹಾಗು ಆಧಿಕಾರಿಕವಾಗಿ ನಿರೂಪಿಸಿರುವ ಕೃತಿಯೆಂಬುದು ಇದರ ಹೆಗ್ಗಳಿಕೆಯಾಗಿದೆ. ಸಂಗಮ ವಂಶದ ಆದಿಯಿಂದ ಹಿಡಿದು ಸಾಳುವ, ತುಳುವ ವಂಶದ ರಾಜರ ಆಳ್ವಿಕೆಯನ್ನು ಒಳಗೊಂಡು ಸದಾಶಿವರಾಯರವರೆಗಿನ ಭವ್ಯ ಇತಿಹಾಸವನ್ನು ವರ್ತಮಾನಕ್ಕೆ ತಂದು ಈ ಕೃತಿಯೂ ನಮ್ಮ ಮುಂದಿಡುತ್ತದೆ.
©2025 Book Brahma Private Limited.