ಅಲೆಗ್ಸಾಂಡರ್ ಡ್ಯೂಮಾನ ’ದ ಕೆಂಟ್ ಆಫ್ ಮಾಂಟೆಕ್ರಿಸ್ಟೊ’ ಕಾದಂಬರಿಯನ್ನು ಶ್ರೀನಿವಾಸಾಚಾರ್ಯರು ದೇಶ, ಭಾಷೆಗಳಿಗೆ ಹೊಂದುವಂತೆ ರೂಪಾಂತರಿಸಿದ್ದಾರೆ. ಅವರ ಮೂರು ಸಂಪುಟಗಳಲ್ಲಿ ಇದು ಎರಡನೆಯದು. ಅಸೂಯಾಪರರ ಸಂಚಿನಿಂದ ದೇಶದ್ರೋಹದ ಆಪಾದನೆಯ ಮೇರೆಗೆ ನಾಯಕನು ಸೆರೆಮನೆ ಸೇರಬೇಕಾಗುತ್ತದೆ. 14 ವರ್ಷ ಅಲ್ಲಿಯೇ ಕಳೆದು, ನಂತರ ಅಲ್ಲಿಂದ ತಪ್ಪಿಸಿಕೊಂಡು, ತನಗೆ ಅನ್ಯಾಯ ಮಾಡಿದ್ದವರ ಮೇಲೆ ಸೇಡು ತೀರಿಸಿಕೊಳ್ಳಬಯಸಿದರೂ ಆ ಕಾರ್ಯವನ್ನು ಭಗವಂತನಿಗೇ ಬಿಟ್ಟುಬಿಡುತ್ತಾನೆ. ಇದು ಎರಡನೇ ಸಂಪುಟದಲ್ಲಿರುವ ಪ್ರಮುಖ ವಿವರ.
©2025 Book Brahma Private Limited.