ಕ್ರಿ.ಶ.1300 ರಿಂದ 1564 ರವರೆಗಿನ ಸುಮಾರು 250 ವರ್ಷಗಳ ಇತಿಹಾಸ ವ್ಯಾಪ್ತಿಯ ಹರವುಳ್ಳ ಈ ಸಂಪುಟವು ಮುಖ್ಯವಾಗಿ ಚರ್ಚ್ ಸುಧಾರಣೆಗೆ ಸಂಬಂಧಿಸಿದ್ದಾಗಿದೆ. ರೋಮನ್ ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟ್ ಧರ್ಮಶ್ರದ್ಧೆಗಳ ನಡುವಣ ಘರ್ಷಣೆ, ನ್ಯಾಯಾಲಯದ ಕ್ರೌರ್ಯ ಮತ್ತು ದಂಡನೆಗಳು, ನೈತಿಕ ಮೌಲ್ಯಗಳ ಅಧಃಪತನ, ಚರ್ಚುಗಳ ಧನದಾಹ, ಸಂನ್ಯಾಸಿ ಮಠಗಳ ವೇಶ್ಯಾವಾಟಿಕೆ ಇವುಗಳ ಸುಧಾರಣೆಗಾಗಿ ಇರಾಸ್ಮಸ್ ಲೂಥರ್, ಮೆಲಾಂಗ್ಥನ್, ಕ್ಯಾಲ್ವಿನ್, 8ನೆಯ ಹೆನ್ರಿ ಮುಂತಾದವರು ನಡೆಸಿದ ಹೋರಾಟ, ಜೊತೆಗೆ ಆಯಾ ಕಾಲದ ಕಲೆ, ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ, ವಾಣಿಜ್ಯ ಕ್ರಾಂತಿ, ಸಾಮಾಜಿಕ ಕ್ರಾಂತಿ, ಧಾರ್ಮಿಕ ಸುಧಾರಣೆ, ಪ್ರತಿಸುಧಾರಣೆಗಳು ನಡೆದು ಬಂದ ಹಾದಿಯ ಕುರಿತು ವಿವರಣೆಗಳನ್ನು ಈ ಕೃತಿಯೂ ಒದಗಿಸುತ್ತದೆ.
©2025 Book Brahma Private Limited.