ಬೌದ್ಧ ಧರ್ಮದ ಕ್ಷೇತ್ರದಲ್ಲಿ ವಿಶೇಷವಾಗಿ ಅಧ್ಯಯನ ಮಾಡಿರುವ ರಷ್ಯನ್ ತತ್ತ್ವಶಾಸ್ತ್ರಜ್ಞ ಥಿಯೊಡೋರ್ ಶೆರ್ಬಾತ್ಸ್ಕಿ ಅವರ ಮಹತ್ವದ ಕೃತಿಗಳಲ್ಲಿ ಒಂದಾಗಿರುವ ದ ಸೆಂಟ್ರಲ್ ಕನ್ಸೆಪ್ಷನ್ ಆಫ್ ಬುದ್ಧಿಸಂ ನ ಈ ಕನ್ನಡ ಅನುವಾದವನ್ನು ಹಿರಿಯ ಐ.ಎ.ಎಸ್ ಅಧಿಕಾರಿಗಳಾದ ಬಿ.ಆರ್.ಜಯರಾಮರಾಜೇ ಅರಸ್ ರವರು ಮಾಡಿದ್ದಾರೆ. ಬೌದ್ಧ ಧರ್ಮದಲ್ಲಿನ ಸ್ಕಂಧಗಳು, ಆಯತನಗಳು ಧಾತುಗಳು, ಸಂಸ್ಕಾರ ಸಂಜ್ಞಾನ, ಅನಾತ್ಮ, ಕರ್ಮ, ಪ್ರತೀತ್ಯಸಮುತ್ಪಾದ, ಸಾಂಖ್ಯಯೋಗ ಸಿದ್ಧಾಂತ, ಸಂಜ್ಞಾನ ಸಿದ್ಧಾಂತ ಮೊದಲಾದವುಗಳನ್ನು ಸರಳವಾದ ಭಾಷೆಯಲ್ಲಿ ಅನುವಾದಿಸಿದ್ದಾರೆ. ಇದರ ಸಂಗಡ ನೀಡಿರುವ ಅನುಬಂಧಗಳು ಸರ್ವಾಸ್ತಿವಾದ ಪಂಥದ ಮೂಲ ತತ್ತ್ವಗಳ ಬಗ್ಗೆ ವಸುಬಂಧುವಿನ ವಿಶ್ಲೇಷಣೆ, ಸರ್ವಾಸ್ತಿವಾದಿಗಳ ಪ್ರಕಾರ ಧಾತುಗಳ ಕೋಷ್ಟಕ ಇವು ಅಧ್ಯಯನಶೀಲರಿಗೆ ಉಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.
©2024 Book Brahma Private Limited.