ಅಲೆಗ್ಸಾಂಡರ್ ಡ್ಯೂಮಾನ ’ದ ಕೆಂಟ್ ಆಫ್ ಮಾಂಟೆಕ್ರಿಸ್ಟೊ’ ಕಾದಂಬರಿಯನ್ನು ಶ್ರೀನಿವಾಸಾಚಾರ್ಯರು ದೇಶ, ಭಾಷೆಗಳಿಗೆ ಹೊಂದುವಂತೆ ರೂಪಾಂತರಿಸಿದ್ದಾರೆ. ಇದು ಮೂರನೇ ಮತ್ತು ಕೊನೆಯ ಸಂಪುಟ. ಕಥಾನಾಯಕನು ಸೆರೆಮನೆಯಲ್ಲಿದ್ದಾಗ ತನ್ನಂತೆಯೇ ಬಂಧಿಯಾಗಿದ್ದ ಒಬ್ಬ ಸನ್ಯಾಸಿಯಿಂದ ತನಗೆ ದೊರೆತ ಧನದಿಂದ ಐಶ್ವರ್ಯವಂತನಾಗಿ, ತನ್ನ ಆಯುಸ್ಸು, ಆರೋಗ್ಯ ಹಾಗೂ ಐಶ್ವರ್ಯ ಪರೋಪಕಾರಾರ್ಥವಾಗಿಯೇ ಇರಬೇಕೆಂದು ತೀರ್ಮಾನಿಸಿ ದೀನರಿಗಾಗಿ, ಅನಾಥರಿಗಾಗಿ ತನ್ನ ಐಶ್ವರ್ಯವನ್ನು ವಿನಿಯೋಗಿಸುವ ವಿವರಗಳು ಗ್ರಂಥದಲ್ಲಿವೆ.
©2025 Book Brahma Private Limited.