ಯುಗಾಂತ

Author : ಸರಸ್ವತಿ ಗಜಾನನ ರಿಸಬೂಡ

Pages 240

₹ 80.00




Year of Publication: 2007

Synopsys

ಮಹಾಭಾರತದ ಅಧ್ಯಯನ ಮಾಡಿದ ಖ್ಯಾತ ಸಮಾಜ ವಿಜ್ಞಾನಿ ಇರಾವತಿ ಕರ್ವೆಯವರು ಅದರ ವೀರಪುರುಷರ, ಪ್ರಸಿದ್ಧ ಸ್ಥಳಗಳ ಬಗೆಗೆ ಬರೆದ ಲೇಖನಗಳ ಸಂಗ್ರಹ ಈ ಕೃತಿ.

ಭೀಷ್ಮನು ಸೇನಾಪತಿಯಾಗಿದ್ದರೂ, ಯುದ್ಧವನ್ನು ತಡೆಯಲು ಮಾಡಿದ ಪ್ರಯತ್ನ, ಗಾಂಧಾರಿಯ ಮಾನಸಿಕ ಭಾವನೆಗಳು, ಕುಂತಿಯ ಪಾತ್ರ, ಅವಳ ನ್ಯಾಯಬುದ್ಧಿ, ವಾಸ್ತವಿಕ ಪ್ರಜ್ಞೆ, ಕಷ್ಟಸಹಿಷ್ಣುತೆ ಇವು, ದ್ರೌಪದಿಯ ಮತ್ತು ಕರ್ಣನ ವ್ಯಕ್ತಿತ್ವಗಳು, ದ್ರೌಪದಿಯ ಮತ್ತು ಕರ್ಣನ ವ್ಯಕ್ತಿತ್ವಗಳು, ಧರ್ಮರಾಯ ವಿದುರರ ಸಂಬಂಧ, ಇವೆಲ್ಲಕ್ಕೂ ಮಿುಗಿಲಾಗಿ ಕೃಷ್ಣನ ಪಾತ್ರ ಮತ್ತು ಅವನು ವಾಸುದೇವನಾಗುವುದು ಈ ಎಲ್ಲಾ ಸಂಗತಿಗಳ ಕುರಿತ ವಿವರಗಳನ್ನು ಲೇಖಕರು ಕೃತಿಯಲ್ಲಿ ಒದಗಿಸಿದ್ದಾರೆ.

ಸರಸ್ವತಿ ಗಜಾನನ ರಿಸಬೂಡ ಅವರು ಇದನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಒಬ್ಬ ಮಾನವ ಶಾಸ್ತ್ರಜ್ಞೆ ಹಾಗೂ ಸಮಾಜಶಾಸ್ತ್ರಜ್ಞೆ ದೇಶದ ಮಹಾಕಾವ್ಯವನ್ನು ಹೇಗೆ ವಿಶ್ಲೇಷಿಸಿದ್ದಾರೆ ಎಂಬ ಕುತೂಹಲ ತಣಿಸುತ್ತದೆ ’ಯುಗಾಂತ’. 

About the Author

ಸರಸ್ವತಿ ಗಜಾನನ ರಿಸಬೂಡ
(31 December 1931 - 25 August 2021)

ಸರಸ್ವತಿ ಗಜಾನನ ರಿಸಬೂಡ, ಬಿ.ಎ. ಪದವಿ ಪಡೆದವರು. ಇವರು ಜನಿಸಿದ್ದು 1931ರ ಡಿಸೆಂಬರ್‌ 31ರಂದು ಧಾರವಾಡದಲ್ಲಿ. ತಂದೆ ದತ್ತಾತ್ರೇಯ ವೆಂಕಟೇಶ ದಿವಾಕರ, ತಾಯಿ- ಸರಸ್ವತಿ . ಯುಗಾಂತ, ಮಾನವ ಎಚ್ಚೆತ್ತಾಗ, ಭಾರತೀಯ ಮುಸಲ್ಮಾನರು, ವಾಲ್ಮೀಕಿ ರಾಮಾಯಣ-ವರ ಮತ್ತು ಶಾಪ, ಭಾರತದ ಸ್ವತಂತ್ರ್ಯ ಸಂಗ್ರಾಮ, ಸ್ತ್ರೀಪುರುಷ ಇವರ ಅನುವಾದಿತ ಕೃತಿಗಳು ಪ್ರಕಟವಾಗಿದೆ. ...

READ MORE

Related Books