ಶ್ರೀ ಪೈಯಪ್ಪನವರು, ಸ್ವಾಮಿ ಅಯ್ಯಪ್ಪನ ಕಥೆಯನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಭೂಮಿಯಲ್ಲಿ ಜನನ, ರಾಜನ ಮನೆಯನ್ನು ಅವನು ಸೇರಿದುದು, ತನ್ನ ಗುರುವಿನ ಮಗನಿಗೆ ವಾಕ್ಛಕ್ತಿಯನ್ನು ನೀಡಿದುದು, ತನ್ನ ಬಗ್ಗೆ ಅಸೂಯೆಯಿದ್ದ ರಾಣಿಗೆ ಚಿರತೆಯ ಹಾಲನ್ನು ತಂದುಕೊಟ್ಟುದು, ರಾಕ್ಷಸಿ ಮಹಿಷಿಯನ್ನು ನಾಶಮಾಡಿದುದು, ರಾಜನಿಗೆ ಅಮರತ್ವವನ್ನು ಕರುಣಿಸಿದುದು, ಪೈಯಪ್ಪನವರು ಇಂತಹ ಹಲವಾರು ಭಗವಂತನ ಮಹಿಮೆಯ ಕುರಿತು ಸರಳವಾಗಿ ವಿವರಣೆಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಈ ಕೃತಿಯನ್ನು ಗಿರಿಜಾ ಶಾಸ್ತ್ರಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅಯ್ಯಪ್ಪನ ಪೂಜೆಯ ವಿಧಾನಗಳು, ಅಲ್ಲಿಗೆ ಕೈಗೊಳ್ಳುವ ಯಾತ್ರೆಯ ಗೂಢತತ್ತ್ವ, ಆಧ್ಯಾತ್ಮಿಕ ಪ್ರಾಮುಖ್ಯತೆ ಈ ವಿಷಯಗಳ ಕುರಿತ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.