ಭಾರತದ ರಾಜಕೀಯ ಸಿದ್ಧಾಂತದಲ್ಲಿ ಪರಮಾಧಿಕಾರ ಮತ್ತು ರಾಜ್ಯ ಇವನ್ನು ಪರಿಶೀಲಿಸುವುದು ಈ ಕೃತಿಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪರಮಾಧಿಕಾರದ ಅಂಗೀಕೃತ ಸ್ವರೂಪ, ಸ್ವಭಾವ, ಅಂತಹ ಅಧಿಕಾರವನ್ನು ಪಡೆದ ರಾಜರಿಗೆ ವಿಧಿಸಲಾಗಿದ್ದ ಕಟ್ಟು ಕಟ್ಟಳೆಗಳು, ಅವನ ಮತ್ತು ಅವನ ಪ್ರಜೆಗಳ ನಡುವಿನ ಸಂಬಂಧಗಳು, ಇದಕ್ಕೆ ದಾರಿ ದೀಪವಾಗಿದ್ದ ಬೃಹಸ್ಪತಿ ಮತ್ತು ಶುಕ್ರ ನೀತಿಗಳು, ಕೌಟಿಲ್ಯನ ಅರ್ಥಶಾಸ್ತ್ರ, ಮಹಾಭಾರತ, ಇವುಗಳನ್ನು ವಿವರವಾಗಿ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಪರಮಾಧಿಕಾರವನ್ನು ಪಡೆದಿದ್ದರೂ ರಾಜರು ಹೇಗೆ ನಿರಂಕುಶ ಪ್ರಭುಗಳಾಗುವುದು ಸಾಧ್ಯವಿರಲಿಲ್ಲ ಎಂಬುದರ ಕುರಿತ ಸ್ಪಷ್ಟವಾದ ವಿವರಣೆಗಳನ್ನು ಈ ಕೃತಿಯು ನಮಗೆ ನೀಡುತ್ತದೆ.
©2025 Book Brahma Private Limited.