ವೀರ ನರಸಿಂಹರಾಯ ವಿಜಯನಗರ ಸಾಮ್ರಾಜ್ಯ ಚರಿತ್ರೆಯಲ್ಲಿ ಬರುವ ತುಳುವ ವಂಶದ ಸ್ಥಾಪಕ. ಈತ ವಿಜಯನಗರದ ಅರಸ ಕೃಷ್ಣದೇವರಾಯನಿಗೆ ಸ್ಫೂರ್ತಿ ಒದಗಿಸಿದಾತ. ಕೃಷ್ಣದೇವರಾಯನಿಗಿಂತ ಮೊದಲೇ ತನ್ನ ಆಸ್ಥಾನದಲ್ಲಿ ಅಷ್ಟ ದಿಗ್ಗಜರೆಂಬ ಕವಿ ಶೇಖರರನ್ನು ಪೋಷಿಸಿದವನು.
ಈತನ ಬಗ್ಗೆ ಅನೇಕ ಕಟ್ಟುಕತೆಗಳು ಬಂದಿದ್ದು ಅದರಲ್ಲಿ ಒಂದು ಕೃಷ್ಣದೇವರಾಯನ ಕಣ್ಣು ಕೀಳಿಸಲು ಯತ್ನಿಸಿದ ಎಂಬುದು. ಆದರೆ ಇವೆಲ್ಲವು ಸುಳ್ಳು ಎಂಬುದನ್ನು ಸರ್ವಮಾನ್ಯವಾದ ಆಧಾರಗಳಿಂದ ದೃಢಪಡಿಸುತ್ತದೆ ಕೃತಿ. ವೀರನರಸಿಂಹರಾಯನ ಆಳ್ವಿಕೆಯ ಕಾಲದ ಆರ್ಥಿಕ, ಸೈನಿಕ ವ್ಯವಸ್ಥೆಗಳು, ವಿದೇಶಿಗರೊಂದಿಗಿನ ವ್ಯಾಪಾರ ಸಂಬಂಧ, ಶಾಂತಿ ಸುವ್ಯವಸ್ಥೆ, ಗುಪ್ತಚರ ವಿಭಾಗ, ಆಡಳಿತ ಪದ್ಧತಿ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ವಿವರಗಳನ್ನು ಹಾಗೂ ತುಳುವ ವಂಶದ ಮೂಲ, ಬೆಳವಣಿಗೆ ಕುರಿತ ಮುಖ್ಯ ಮಾಹಿತಿಗಳನ್ನು ಕೃತಿ ನೀಡುತ್ತದೆ.
©2025 Book Brahma Private Limited.