ಸರ್ವೋದಯದ ನೇತಾರ ವಿನೋಬಾ ಬಾವೆಯವರ ವಿಚಾರಧಾರೆಯಲ್ಲಿ, ಸರ್ವೋದಯವು ಜೀವನದ ಸಮಗ್ರ ಸಿದ್ಧಾಂತವಾಗಿ ಸ್ವದೇಶಿ ನೆಲದಲ್ಲಿ ಬೇರು ಬಿಟ್ಟು ಜನತೆಯ ಆಧ್ಯಾತ್ಮಿಕ ಹಾಗೂ ಐಹಿಕ ಜೀವನದ ವಿಷಯಗಳನ್ನು ಒಳಗೊಂಡಿರುತ್ತದೆ. ಜೀವನದ ಆದರ್ಶ, ದೇಶಸೇವೆ, ಕಾಯಕ, ನೀತಿ ಹಾಗೂ ಧರ್ಮ, ಭೂದಾನ, ಗ್ರಾಮದಾನ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಹಾಗೆ ಅವರ ಕೃತಿಗಳ, ಭಾಷಣಗಳ ಉದೃತ ಭಾಗಗಳನ್ನು ಈ ಕೃತಿಯಲ್ಲಿ ನೋಡಿದಾಗ, ಈ ದಿಸೆಯಲ್ಲಿ ನಡೆಸುವ ಐಹಿಕ ಪ್ರಯತ್ನಗಳನ್ನೂ ಅವರು ಆಧ್ಯಾತ್ಮಿಕಗೊಳಿಸುವ ಪ್ರಕ್ರಿಯೆಯನ್ನಾಗಿಸುತ್ತಿರುವುದು ನಮಗೆ ಈ ಕೃತಿಯಲ್ಲಿ ಕಂಡುಬರುತ್ತದೆ. ಈ ಕೃತಿಯನ್ನು ಶಂಸ ಐತಾಳ್ ರು ರಚಿಸಿದ್ದಾರೆ.
©2025 Book Brahma Private Limited.