ಜೂಲ್ಸ್ ವೆರ್ನ್, ಫ್ರೆಂಚ್ ಭಾಷೆಯಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವವರಲ್ಲಿ ಪ್ರಮುಖರು. ಇವರ ’ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ತ” ಎಂಬ ರೋಚಕವಾದ ಕೃತಿಯ ಸಂಗ್ರಹಾನುವಾಗಿದೆ ಈ ಕೃತಿ. ಇದನ್ನು ಎಂ. ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಕತೆಯಲ್ಲಿ ವಿಜ್ಞಾನಿಯೊಬ್ಬ ತನಗೆ ಸಿಕ್ಕಿದ ಒಂದು ಸಣ್ಣ ಸೂಚನೆಯ ಮೇರೆಗೆ ಭೂಗರ್ಭದತ್ತ ಯಾತ್ರೆಮಾಡಲು ಜೊತೆಗಾರರೊಡನೆ ಹೊರಡುತ್ತಾನೆ. ಎಲ್ಲಾ ಕಷ್ಟಗಳನ್ನೂ ಸಹಿಸಿಕೊಂಡು ಅಗ್ನಿಪರ್ವತದ ಗುಂಡಿಯೊಳಕ್ಕೆ ಇಳಿದು ಅವರೆಲ್ಲರೂ ಹೋಗುತ್ತಾರೆ. ಆದರೂ ಅವರು ನೈಸರ್ಗಿಕ ಕಾರಣಗಳಿಂದಾಗಿ ಭೂ ಗರ್ಭವನ್ನು ತಲುಪಲು ಸಾಧ್ಯವಾಗದೆ ಊರಿಗೆ ಹಿಂತಿರುಗುತ್ತಾರೆ. ಹಿಂದಕ್ಕೆ ಬಂದ ವಿಜ್ಞಾನಿ ಅತಿಯಾದ ಕೀರ್ತಿಯನ್ನು ಗಳಿಸುತ್ತಾನೆ. ಈ ಸಂಗತಿಗಳ ಕುರಿತು ಲೇಖಕರು ವಿವರವಾದ ಮಾಹಿತಿಯನ್ನು ಈ ಕೃತಿಯಲ್ಲಿ ನೀಡಿದ್ದಾರೆ.
©2025 Book Brahma Private Limited.