ಗಾಂಧೀಜಯಂತಿ ಮತ್ತು ಮಿನಿಸ್ಟರ್

Author : ಎಸ್. ಲಕ್ಷ್ಮೀದೇವಿ

Pages 153

₹ 50.00




Year of Publication: 2007

Synopsys

ಇಲ್ಲಿರುವ ಎರಡು ನಾಟಕಗಳಲ್ಲಿ ಒಂದರಲ್ಲಿ ಮಹಾತ್ಮಗಾಂಧಿಯವರ ಪಾತ್ರವನ್ನು ತರುವ ಮೂಲಕ ನಾಟಕಕಾರ ಡಿ. ವಿಜಯಭಾಸ್ಕರ್ ಅವರು ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಮೌಲ್ಯಗಳು ಕುಸಿದು, ಅಪಹಾಸ್ಯಕ್ಕೆ ಈಡಾಗುತ್ತಿರುವ ಚಿತ್ರಣವನ್ನು ಚಿತ್ರಿಸಿದ್ದಾರೆ.

ಸಾಧಿಸಿದ ಸ್ವಾತಂತ್ರ್ಯವನ್ನು ಸರಿಯಾಗಿ ಸಂಭಾಳಿಸಲಾಗದ ಜನತೆ ಇನ್ನೂ ಸಾಮ್ರಾಜ್ಯ ಶಾಹಿಯ ವೈಶಿಷ್ಟ್ಯವಾದ ವ್ಯಕ್ತಿಪೂಜೆ, ವಂಶಾಡಳಿತಕ್ಕೆ ಗೌರವ, ನಂತರ ಬೆಳೆದ ಸ್ವಜನಪಕ್ಷಪಾತ, ಲಂಚಕೋರತನ, ಗಾಂಧಿಯ ಹೆಸರಿನಲ್ಲಿಯೇ ಆಗುತ್ತಿರುವ ಅನ್ಯಾಯಗಳು, ದರೋಡೆಗಳು, ಜನಪ್ರತಿನಿಧಿಗಳ ದುಂಡಾವೃತ್ತಿ, ಚುನಾವಣೆಯಲ್ಲಿನ ಭ್ರಷ್ಟಾಚಾರ, ಗಾಂಧಿಗೇ ಮರಣದಂಡನೆ, ರಿಯಲ್ ಎಸ್ಟೇಟ್ ಸರಕಾರಗಳ ನಡುವಿನ ಅಪವಿತ್ರ ಮೈತ್ರಿ ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ಲೇಖಕರು ನೀಡಿದ್ದಾರೆ.

About the Author

ಎಸ್. ಲಕ್ಷ್ಮೀದೇವಿ

ಎಸ್. ಲಕ್ಷ್ಮೀದೇವಿ ಹಲವಾರು ನಾಟಕಗಳ ನಿರ್ದೇಶನ, ಅಭಿನಯ, ಕಂಠದಾನ, ಕಿರುತೆರೆಯ ಕಲಾವಿದೆಯಾಗಿ ಪ್ರಭಾವಿತರಾದವರು.  ಲಕ್ಷ್ಮೀದೇವಿ ಹುಟ್ಟಿದ್ದು ಬೆಂಗಳೂರಿನಲ್ಲಿ . ತಂದೆ ಸಾಥ್ವಿ. ತಾಯಿ ಈಶ್ವರಮ್ಮ. ಚಿಕ್ಕಂದಿನಿಂದಲೂ ನಾಟಕ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.  ಮೊದಲ ದರ್ಜೆಯಲ್ಲಿ ಎಂ.ಎ. ಪದವಿಯನ್ನು ಪಡೆದು ‘ಹೊಸಕೋಟೆಯ ತಾಲ್ಲೂಕಿನ ಗ್ರಾಮದೇವತೆಗಳು: ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್‌..ಡಿ. ಪದವಿಯನ್ನು ಪಡೆದಿದ್ದಾರೆ. ಕಂಠದಾನ ಕಲಾವಿದೆಯಾಗಿ ಹಲವಾರು ಕಿರುತೆರೆಯ ಕಲಾವಿದೆಯರಿಗೆ ನೀಡಿದ ಕಂಠದಾನ. ರಂಗಕೃತಿಗಳ ರಚನೆ-ಸಂಪಾದನೆ-ಭಾಷಾಂತ ಮಾಡಿದ್ದಾರೆ. ಹಲವಾರು ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಂದ ದೊರೆತ ಗೌರವ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.  ...

READ MORE

Related Books