ಐತಿಹಾಸಿಕ ಪರಂಪರೆಯುಳ್ಳ ಸುರಪುರ ಕುರಿತ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಇತಿಹಾಸವನ್ನು ಕಟ್ಟುಕೊಡುವ ಕೃತಿ ’ಸುರಪುರ ಕಥನ. ಸರಗನಾಡಿನ ಒಂದು ಆಯಕಟ್ಟಿನ ಸ್ಥಳ ಸುರಪುರ. ಇದು ಸಗರನಾಡಿನಾ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ರಾಜಧಾನಿಯಾಗಿತ್ತು ಎಂಬುದು ನಿಸ್ಸಂಶಯ. ಇಂತಹಾ ಐತಿಹಾಸಿಕ ಸುರಪುರವನ್ನು ಗೋಸಲ ವಂಶಸ್ಥ ಸುಮಾರು 22 ಜನ ರಾಜರು 2 ಶತಮಾನಕ್ಕೂ ಮೀರಿ ವಾಗಿನಗೇರಿ, ಸುರಪುರವನ್ನು ರಾಜಧಾನಿಯಾಗಿ ಮಾಡಿಕೊಂಡು ವಿಜಯಪುರದ ಆದಿಲ್ ಶಾಹಿಗಳೊಂದಿಗೂ, ಮೊಗಲರ ಔರಂಗಜೇಬ ನೊಂದಿಗೂ, ಹೈದ್ರಾಬಾದಿನ ನಿಜಾಮನೊಂದಿಗೂ ಹಾಗೂ ಬ್ರಿಟಿಷರೊಂದಿಗೂ ಸಹ ರಾಷ್ಟ್ರಪ್ರೇಮ, ಸ್ವಾಭಿಮಾನ, ಸ್ವಾತಂತ್ರ್ಯಕಾಗಿ ಹೋರಾಡಿದ್ದಲ್ಲದೆ, ಈ ಭಾಗದ ಐತಿಹಾಸಿಕ, ಸಾಂಸ್ಕೃತಿಕ ಪ್ರಗತಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಗಳು ಇಂದಿಗೂ ಸಹ ಈ ಭಾಗದ ಜನ ಮಾನಸದಲ್ಲಿ ಅಳಿಯದೇ ಉಳಿದಿವೆ.
ಸುರಪುರ ಕುರಿತ ಮಾಹಿತಿ ತಿಳಿಯಲು ನೀವು ಓದಿ ಸುರಪುರ ಕಥನ. ಸಂಸ್ಕೃತ ಮೂಲದ ಶ್ರೀಗುಂಡಾಚಾರ್ಯರು ಬರೆದ ಈ ಕೃತಿಯನ್ನು ಜನಾರ್ದನ ಪಾಣಿಭಾತೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹರಿರಾವ್ ಆದವಾನಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
©2024 Book Brahma Private Limited.