ವಿಶ್ವ ಕವಿ ರವೀಂದ್ರನಾಥ ಠಾಕೂರರ ಇದೇ ಹೆಸರಿನ ಕವನ ಸಂಕಲನವನ್ನು ಎಂ.ಆರ್.ಸಿ. ನಾಗರಾಜನ್ ರು ನೇರವಾಗಿ ಬಂಗಾಳಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿರುವ 100 ಕವನಗಳನ್ನು 100 ದಿನಗಳಲ್ಲಿ ಮುಗಿಸಿ, ಅವುಗಳಲ್ಲಿರುವ ಆಧ್ಯಾತ್ಮಿಕ ಮತ್ತು ನೈತಿಕ ಸಿರಿಯಿಂದಾಗಿ ತಮ್ಮ ತಂದೆಯವರಿಂದಲೇ ಅಭಿಮಾನಪೂರ್ವಕ ಮೆಚ್ಚುಗೆಯನ್ನು ರವೀಂದ್ರರು ಪಡೆದಿದ್ದರು. ವಿಶ್ವಕವಿಯೆಂಬ ಹೆಸರನ್ನು ಗಳಿಸಿದ್ದರೂ, ಅವರು ಭಗವತ್ ಚೈತನ್ಯದ ಮುಂದೆ ವಿನೀತರಾಗಿ ನಿಲ್ಲುತ್ತಾರೆ. ಮುಂತಾದ ಪ್ರಮುಖ ವಿಷಯಗಳ ಕುರಿತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.
©2025 Book Brahma Private Limited.