ಲೇಖಕ ಜೋಗಿ ಅವರ ಸಿನಿಮಾ ಕುರಿತ ಕೃತಿ ‘ಕಥೆ ಚಿತ್ರಕಥೆ ಸಂಭಾಷಣೆ ಜೋಗಿ’. ಈ ಕೃತಿಗೆ ಖ್ಯಾತನಟ ಪ್ರಕಾಶ್ ರೈ ಬೆನ್ನುಡಿ ಬರೆದಿದ್ದಾರೆ. ಜೋಗಿಯವರ ಈ ಪುಸ್ತಕ ಸಿನಿಮಾ ಪ್ರೇಮಿಗಳಿಗೆ, ಸಿನಿಮಾ ಆಸಕ್ತರಿಗೆ ಮುಖ್ಯವಾಗುತ್ತದೆ. ಇಲ್ಲಿ ಪ್ರವಚನ ಇಲ್ಲ. ಪ್ರತಿಯೊಬ್ಬರೂ ತಮ್ಮ ದಾರಿಯ ಹುಡುಕಾಟದ ಕುರಿತು ಬರೆದಿದ್ದಾರೆ. ತಮ್ಮ ಸಿನಿ ಪ್ರಯಾಣವನ್ನು ದಾಖಲಿಸಿದ್ದಾರೆ. ಹೀಗಾಗಿ, ಇದು ಪ್ರತಿಯೊಬ್ಬರೂ ತಮಗೆ ತಾವೇ ಹೇಳಿಕೊಳ್ಳಬಹುದಾದ ಸ್ವಗತ. ಎಲ್ಲ ಹೊಸಪೀಳಿಗೆಯ ನಿರ್ದೇಶಕರು ಆಲೋಚಿಸುವ ಕ್ರಮದತ್ತ ಒಂದು ದಾರಿಯಂತಿದೆ. ಇಲ್ಲಿ ಯಾರೂ ಇದು ಸರಿ, ಇದು ತಪ್ಪು ಅಂತ ಹೇಳುತ್ತಿಲ್ಲ. ಇದು ಅರಳುವ ಕ್ರಿಯೆಯನ್ನು ಹಿಡಿಯುವ ಪರಿ. ಆಗಲೇ ನೋಡಿರುವುದನ್ನು ಬಿಟ್ಟು, ಇವತ್ತಿನ ಮನಸ್ಸು ಹೇಗೆ ಯೋಚಿಸುತ್ತದೆ. ಅದನ್ನು ದುಡಿಸಿಕೊಳ್ಳುವುದು ಹೇಗೆ ಅನ್ನುವುದನ್ನು ಗಮನಿಸಿರುವ ಜೋಗಿ, ಆ ಪ್ರಕ್ರಿಯೆಗಳನ್ನು ಈ ಕೃತಿಯ ಮೂಲಕ ವಿಶ್ಲೇಷಿಸಿದ್ದಾರೆ.
©2024 Book Brahma Private Limited.