ಕೆ.ವಿ. ಸುಬ್ಬಣ್ಣನವರ ‘ಸಮೀಪ ಚಿತ್ರಗಳು ದೂರ ಚಿತ್ರಗಳು’ ಕೃತಿಯನ್ನು ಬಿಟ್ಟರೆ ಕನ್ನಡ ಸಿನಿಮಾ ಸಾಹಿತ್ಯದಲ್ಲಿ ಅತ್ಯಂತ ವೈಜ್ಞಾನಿಕವಾಗಿ ಬರೆದ ಕೃತಿ ಮತ್ತೊಂದಿಲ್ಲ. ಆ ಸ್ಥಾನವನ್ನು ಲೇಖಕ ಎ.ಎನ್. ಪ್ರಸನ್ನ ಅವರು ‘ಚಿತ್ರ ಕಥೆ’ ಮೂಲಕ ತುಂಬಿಕೊಟ್ಟಿದ್ದಾರೆ. ಚಿತ್ರದ ಕಥಾನಕವನ್ನು ಅತ್ಯಂಥ ನವಿರಾಗಿ ಲೇಖಕರು ಚಿತ್ರಿಸುವುದು ಗಮನ ಸೆಳೆಯುತ್ತದೆ. ಸಿನಿಮಾದಲ್ಲಿ ಒಂದು ಭಾಷೆಯು ಯಾವ ರೀತಿ ಪರಿವರ್ತನೆಗೊಳ್ಳುತ್ತದೆ ಎಂಬ ಬಗ್ಗೆಯೂ ಮಾಹಿತಿ ಇದೆ. ಹೀಗಾಗಿ, ಈ ಕೃತಿ ಮಹತ್ವ ಪಡೆಯುತ್ತದೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಕೃತಿಯು 1940 ರಿಂದ ಜಾಗತಿಕವಾಗಿ ಪ್ರಸಿದ್ಧಿ ಪಡೆದ 32 ಸಿನಿಮಾಗಳನ್ನು ಅವಲೋಕಿಸುತ್ತದೆ.
ಪುಸ್ತಕ ಪರಿಚಯ: ಹೊಸತು-2009 ಜೂನ್
ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಬಾಚಿಕೊಂಡ ವಿವಿಧ ದೇಶಭಾಷೆಗಳ ಮೂವತ್ತೆರಡು ಸಿನಿಮಾಕಥೆಗಳು ಇಲ್ಲಿವೆ. ದೇಶ-ವಿದೇಶಗಳ ಜೀವನಶೈಲಿ ಪರಸ್ಪರ ಭಿನ್ನ. ಆಯಾ ಪ್ರದೇಶಗಳ ನೋವು-ನಲಿವು-ಸಮಸ್ಯೆಗಳ ತಳಹದಿ ಯೊಂದಿಗೆ ನಿರ್ಮಾಣಗೊಂಡ ಚಿತ್ರಗಳಿಂದ ನಾವು ದೂರದ ನಾಡಿನ ನಾಡಿಮಿಡಿತವನ್ನು ಗ್ರಹಿಸಬಹುದು. ಚಲನಚಿತ್ರಗಳ ಮೂಲಕ ಮಾಡಿದ ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣೆ ಮತ್ತು ಜಾಗತಿಕ ಚಿತ್ರೋತ್ಸವದಲ್ಲಿ ಮಿಂಚಿದ ಸಿನಿಮಾಗಳ ವಿಶ್ಲೇಷಣೆ ಎರಡೂ ಇಲ್ಲಿವೆ. ಪ್ರತಿಭಾವಂತ ಚಿತ್ರನಿರ್ದೇಶಕರ ಪರಿಚಯವಿದೆ. ಸ್ಪೀಲ್ ಬರ್ಗ್ ಅವರ 'ಶಿಂಡ್ಲರ್ ಲಿಸ್ಟ್' ಹಾಗೂ ತಾಮಿನೆ ಮಿಲಾನಿ ಅವರ 'ಹಿಡನ್ ಹಾಫ್' ಗಮನ ಸೆಳೆಯುತ್ತವೆ. ಭಾರತದ ಒಂದೇ ಒಂದು ಚಿತ್ರದ ಪರಿಚಯವೂ ಇಲ್ಲದಿರುವುದು ಪುಸ್ತಕದ ಕೊರತೆಯೆಂದೇ ಹೇಳಬೇಕಾಗಿದೆ.
©2024 Book Brahma Private Limited.