ಲೇಖಕ ಸಿರಿಗೇರಿ ಯರಿಸ್ವಾಮಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿರಿಗೇರಿಯವರು. ತಂದೆ ವಿರುಪಾಕ್ಷಯ್ಯ, ತಾಯಿ ಅನ್ನಪೂರ್ಣಮ್ಮ, ಎಂ.ಎ, ಬಿ.ಇಡಿ ಪದವೀಧರರು. 16 ಸ್ವತಂತ್ರ ಕೃತಿಗಳು, ತಮ್ಮ ಅನ್ನಪೂರ್ಣ ಪ್ರಕಾಶನದ ಮೂಲಕ 67 ಕೃತಿಗಳನ್ನು ಪ್ರಕಾಶಿಸಿದ್ದಾರೆ. 37 ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯಿಂದ (2017) ಇವರ ಪುಸ್ತಕಕ್ಕೆ ಬಹುಮಾನ ಲಭಿಸಿದೆ.
ಕೃತಿಗಳು: ಸ್ವರ ಗಂಧರ್ವ (ಸಂಪಾದನೆ), ಸಮ್ಮೇಳನಾಧ್ಯಕ್ಷರ ಭಾಷಣಗಳು (ಸಂಪಾದನೆ), ರಂಗಸಂಭ್ರಮ (ಅಂಕಣಗಳ ಬರಹ), ಬೆಟ್ಟದ ಹೂವು (ಸಂ), ದೊಡ್ಮನೆ ಅಮ್ಮ (ಸಂ), ಸ್ನೇಹಶೀಲ.